congress appointment ಶಾಕೀರ್ ಸನದಿ.
ಹುಬ್ಬಳ್ಳಿ: congress appointment ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವತಿಯಿಂದ ದೇಶವ್ಯಾಪಿ ನಡೆಯುತ್ತಿರುವ "ಛಾತ್ರೋಂ ಕಿ ಗೂಂಜ್' ಅಭಿಯಾನಕ್ಕೆ ಹಾಸನ ಜಿಲ್ಲೆಗೆ ವೀಕ್ಷಕರಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ ಅವರನ್ನು ನೇಮಕ ಮಾಡಲಾಗಿದೆ.
ಈ ಅಭಿಯಾನದ ಉದ್ದೇಶ ದೇಶದ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ವಿಳಂಬ, ನೇಮಕಾತಿಯಲ್ಲಿನ ಅನಿಶ್ಚಿತತೆ, ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ತೊಂದರೆಗಳನ್ನು ಆಲಿಸಿ, ಅವುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸುವುದಾಗಿದೆ.
ಈ ಜವಾಬ್ದಾರಿಯ ಅಂಗವಾಗಿ ಶಾಕೀರ ಸನದಿ ಅವರು ಹಾಸನ ಜಿಲ್ಲೆಯ ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಅಭಿಯಾನದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಅನುಭವ, ಸಮಸ್ಯೆಗಳು ಮತ್ತು ಆಶಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವ ಜೊತೆಗೆ, ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲಿದ್ದಾರೆ.
ಇದಲ್ಲದೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ದಾವಣಗೆರೆ ಜಿಲ್ಲೆಯಲ್ಲಿ "ಸಂಘಟನ ಸೃಜನ್ ಅಭಿಯಾನ' ಅಡಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ (ಡಿಸಿಸಿ) ಆಯ್ಕೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಸಹಯೋಜಕರಾಗಿಯೂ ಶಾಕೀರ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.