ಧಾರವಾಡ ರಾಜೀವ ಗಾಂಧಿ ವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾಥಿರ್ ಪರಿಷತ್​ನ ಇನ್ವೆಸ್ಟಿಚರ್​ ಸಮಾರಂಭ ಜರುಗಿತು. 
ಧಾರವಾಡ

ನಾಯಕತ್ವದ ಜವಾಬ್ದಾರಿಯಿಂದ ಆತ್ಮವಿಶ್ವಾಸ

ಮಂಜುನಾಥ ಅಂಗಡಿ
ಧಾರವಾಡ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು, ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇನ್ವೆಸ್ಟಿಚರ್​ನಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಶಾಲಾ ನಾಯಕತ್ವದ ಜವಾಬ್ದಾರಿ ವಿದ್ಯಾಥಿರ್ಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಉದ್ದಿಮೆದಾರ ವಸಂತ ಹೊರಟ್ಟಿ ಹೇಳಿದರು.
ನಗರದ ರಾಜೀವ ಗಾಂಧಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಪರಿಷತ್​ನ ಇನ್ವೆಸ್ಟಿಚರ್​ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮೇಯರ್​ ಈರೇಶ ಅಂಚಟಗೇರಿ ಮಾತನಾಡಿ, ಇನ್ವೆಸ್ಟಿಚರ್​ ಸಮಾರಂಭ ಕೇವಲ ಪದವಿ ಅಥವಾ ಬ್ಯಾಡ್ಜ್​ ಧರಿಸುವ ಸಮಾರಂಭವಲ್ಲ. ಅದು ನಾಯಕತ್ವ, ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಸೇವಾ ಮನೋಭಾವದ ಸಂಕಲ್ಪ ಸ್ವೀಕರಿಸುವ ಘಟ್ಟವಾಗಿದೆ ಎಂದರು.
ರಾಜೀವ ಗಾಂಧಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ (ಕರ್ನಾಟಕ) ಅಧ್ಯಕ್ಷ ರಾಘವೇಂದ್ರ ತವನಪ್ಪನವರ, ಜಗದೀಶ ಮಳಗಿ, ಎಸ್​. ರಾಧಾಕೃಷ್ಣನ್​, ಆಡಳಿತ ಮಂಡಳಿ ಸದಸ್ಯ ಬಸವರಾಜ ವಸ್ತ್ರದ, ಶಾಲೆಯ ಪ್ರಾಚಾರ್ಯರಾದ ಡಾ. ಗ್ರೆಟ್ಟಾ ಕೆ., ವೀಣಾ ತುಪ್ಪದ, ಹೇಮಂತ ಅಂಗಡಿ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ವಿದ್ಯಾಥಿರ್ ನಾಯಕರು ಪ್ರಮಾಣವಚನ ಸ್ವೀಕರಿಸಿದರು.