compol ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್​ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಭೂಷಣ್​ ಬೋರಸೆ ಅವರಿಗೆ ನಿರ್ಗಮಿತ ಆಯುಕ್ತ ಎನ್​. ಶಶಿಕುಮಾರ ಅಭಿನಂದಿಸಿದರು. 
ಧಾರವಾಡ

compol ಡ್ರಗ್ಸ್​ಗೆ ಕಡಿವಾಣ ಟ್ರಾಫಿಕ್​ ಸಮಸ್ಯೆಗೆ ಪರಿಹಾರ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬೋರಸೆ ಭರವಸೆ
  • ಡ್ರಗ್ಸ್​ ಸಮಸ್ಯೆ ಎಲ್ಲ ಕಡೆ ಇದೆ
ಹುಬ್ಬಳ್ಳಿ: compol ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮಾದಕ ದ್ರವ್ಯಗಳಿಗೆ (ಡ್ರಗ್ಸ್​) ಕಡಿವಾಣ ಹಾಕುವುದು ಹಾಗೂ ಟ್ರಾಫಿಕ್​ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದು ತಮ್ಮ ಆದ್ಯತೆಯಾಗಲಿದೆ ಎಂದು ನೂತನ ಪೊಲೀಸ್​ ಆಯುಕ್ತ ಭೂಷಣ್​ ಗುಲಾಬರಾವ್​ ಬೋರಸೆ ತಿಳಿಸಿದರು.
ಇಲ್ಲಿಯ ನವನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್​ ಆಯುಕ್ತಾಲಯದಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡ್ರಗ್ಸ್​ ಸಮಸ್ಯೆ ಎಲ್ಲ ಕಡೆ ಇದೆ. ಅದನ್ನು ಕಂಟ್ರೋಲ್​ ಮಾಡಬೇಕಾದರೆ ಮೂಲಕ್ಕೆ ಹೋಗಬೇಕಾಗುತ್ತದೆ. ಬೆಳಗಾವಿಯಲ್ಲಿ ಇದ್ದಾಗ ಡ್ರಗ್ಸ್​ ಮಾಫಿಯಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ಟೀಮ್​ ವರ್ಕ್​ ಮೂಲಕ ಇದನ್ನು ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಟ್ರಾಫಿಕ್​ ಸಮಸ್ಯೆಯ ಮೂಲಗಳನ್ನು ಕಂಡು ಹಿಡಿಯಲು ಧಾರವಾಡ ಐಐಟಿ ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳ ಸಹಾಯ ಪಡೆಯಲಾಗುವುದು. ಅವರು ನೀಡುವ ವೈಜ್ಞಾನಿಕ ಪರಿಹಾರಗಳನ್ನು ಚರ್ಚಿಸಿ ಜಾರಿ ಮಾಡಲಾಗುವುದು. ಪೊಲೀಸರು ಕೇವಲ ದಂಡ ಹಾಕುತ್ತಾರೆ ಎಂಬ ಜನರ ಭಾವನೆ ದೂರ ಮಾಡಿ ಟ್ರಾಫಿಕ್​ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಉತ್ತರಿಸಿದರು.
ಬೆಳಗಾವಿ ಮಹಾನಗರ ಪೊಲೀಸ್​ ಆಯುಕ್ತರಾಗಿ ತಾವು ಕೈಗೊಂಡ ಸುಧಾರಣೆ ಉಪಕ್ರಮಗಳನ್ನು ಮೆಲಕು ಹಾಕಿದ ಅವರು, ಹುಬ್ಬಳ್ಳಿ ಧಾರವಾಡಕ್ಕೂ ಉತ್ತಮ ಎನಿಸುವ ಪೊಲೀಸ್​ ಸುಧಾರಣೆಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಜನಸ್ನೇಹಿ ಪೊಲೀಸ್​ ವ್ಯವಸ್ಥೆ ನಮ್ಮ ಉದ್ದೇಶ. ಅದಕ್ಕಾಗಿ ಜನಪ್ರತಿನಿಧಿಗಳು, ಮಾಧ್ಯಮ ಸೇರಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡುವುದು ಬಹಳ ಮುಖ್ಯ. ಜತೆಗೆ ಮಹಿಳೆಯರು, ಮಕ್ಕಳ ಸುರಕ್ಷತೆ, ಸೈಬರ್​ ಕ್ರೈಂ ತಡೆಗಟ್ಟುವುದು ಮಹತ್ವದ ಕೆಲಸಗಳಾಗಿವೆ ಎಂದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಹಳ ವರ್ಷಗಳಿಂದಲೂ ಇದೆ. ಆದರೆ, ಇರುವ ಸಿಬ್ಬಂದಿಯಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಕೆಲಸಗಳ ಮೂಲಕ ಜನರಿಗೆ ನೆಮ್ಮದಿಯ ಬದುಕು ನೀಡಲು ಪ್ರಯತ್ನಿಸಲಾಗುವುದು.
ಈಗಾಗಲೇ ರೌಡಿ ಶೀಟರ್​ನಲ್ಲಿ ಇರುವವರು, ಹಳೇ ದ್ವೇಷ ಇತ್ಯಾದಿ ಕೇಸ್​ಗಳ ಬಗ್ಗೆ ಗಮನ ಹರಿಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇದೇ ನಾವು ಅವಳಿನಗರ ಜನರಿಗೆ ನೀಡುವ ಅಭಯ ಹಾಗೂ ಭರವಸೆ ಎಂದು ಬೋರಸೆ ಹೇಳಿದರು.
ನಿರ್ಗಮಿತ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಅವರು ಭೂಷಣ್​ ಬೋರಸೆ ಅವರಿಗೆ ಅಧಿಕಾರ ದಂಡ ಹಸ್ತಾಂತರಿಸಿದರು. ಹಿರಿಯ ಅಧಿಕಾರಿಗಳು, ಇನ್ಸಪೆಕ್ಟರ್​ಗಳು ಉಪಸ್ಥಿತರಿದ್ದರು.