ಧಾರವಾಡದಲ್ಲಿ ಹೋಳಿ ಹಬ್ಬ ಸಂಭ್ರಮ
ಧಾರವಾಡ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೋಳಿಯ ರಂಗುರಂಗಿನ ಬಣ್ಣದಾಟದಲ್ಲಿ ಜನ ಮಿಂದೆದ್ದರು.
ಪ್ರಮುಖ ಬಡಾವಣೆಗಳಲ್ಲಿ ಮಕ್ಕಳು, ಯುವಕ- ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಅಲ್ಲಲ್ಲಿ ಕಾಮದಹನ ಮಾಡಿ ಕಾಮಣ್ಣನ ಮೂತಿರ್ಗೆ ಪೂಜೆ ಸಲ್ಲಿಸಿ ಬಣ್ಣದಾಟವನ್ನು ಸಂಭ್ರಮಿಸಿದರು. ಹಾಡುಗಳಿಗೆ ಹೆಜ್ಜೆ ಹಾಕುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.
ನಗರದ ಎಲ್ಐಟಿ ವೃತ್ತ, ದಾಸನಕೊಪ್ಪ ವೃತ್ತ, ಶಿವಾಜಿ ವೃತ್ತ ಸೇರಿ ಇತರೆಡೆ ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿವಾಜಿ ವೃತ್ತದಲ್ಲಿ ಶಾಸಕ ವಿನಯ ಕುಲಕಣಿರ್ ಗೆಳೆಯರ ಬಳಗದಿಂದ ರೇನ್ ಡ್ಯಾನ್ಸ್ ಆಯೋಜಿಸಲಾಗಿತ್ತು. ಯುವಕ- ಯುವತಿಯರು ಡಿಜೆ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಮತ್ತೊಂದೆಡೆ ಎಲ್ಐಸಿ ವೃತ್ತದಲ್ಲಿ ಶಾಸಕ ಅರವಿಂದ ಬೆಲ್ಲದ ಗೆಳೆಯರ ಬಳಗದಿಂದ ಗಡಿಗೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋತ್ಸವದಲ್ಲಿ ಜನರು ಬಣ್ಣ ಎರಚಿ ಕುಣಿದಾಡಿದರು.
ಗ್ರಾಮೀಣ ಪ್ರದೇಶದಲ್ಲಿ ರೈತರು, ಕಾಮಿರ್ಕರು ಹೋಳಿ ಹಾಡುಗಳನ್ನು ಹಾಡುತ್ತ ರಂಜಿಸಿದರು. ಬೃಹತ್ ಪ್ರಮಾಣದ ಉರುವಲಿಗೆ ಕಿಚ್ಚು ಇಡುವ ಮೂಲಕ ರತಿಕಾಮರ ದಹನ ಕಾರ್ಯಕ್ರಮ ನೆರವೇಸಿದರು.
ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಗಾಗಿ ನಗರ, ಜಿಲ್ಲಾ ಪೊಲೀಸರು ಬಂದೂಬಸ್ತ್ ಕೈಗೊಂಡಿದ್ದರು.