Napkin 
ಧಾರವಾಡ

ಅರ್ಧ ವರ್ಷ ಕಳೆದರೂ `ಶುಚಿ' ಸೌಲಭ್ಯವಿಲ್ಲ!

ಜಗದೀಶ ಹೊಂಬಳಿ
"

ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಪಿಯುಸಿ ಕಾಲೇಜು, ವಿವಿಧ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರ ಪಟ್ಟಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ವರ್ಷ ಇನ್ನೂ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ವಿತರಣೆ ಆಗಿಲ್ಲ. ಪೂರೈಕೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಶೀಧ್ರದಲ್ಲಿ ನ್ಯಾಪ್‌ಕಿನ್ ಪೂರೈಕೆ ಆಗಬಹುದು.

"

ಅರ್ಧ ಶೈಕ್ಷಣಿಕ ವರ್ಷ ಕಳೆದರೂ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ವಿತರಣೆ ಆಗದಿರುವುದು ಸರ್ಕಾರದ ನಿಷ್ಕಾಳಜಿ, ಬೇಜವಾಬ್ದಾರಿಯ ಪರಮಾವಧಿ. ವಿದ್ಯಾರ್ಥಿನಿಯರ ವಿಷಯದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಇನ್ನಾದರೂ ಕಾಳಜಿ ವಹಿಸಲಿ.