civil engineers ಹುಬ್ಬಳ್ಳಿಯ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಶಾಖೆಗೆ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲಬಾವಿ ಪ್ರಶಸ್ತಿ ಪ್ರದಾನ ಮಾಡಿದರು. ಉಳವಪ್ಪ ಸುಣಗಾರ, ಸಂಗಮೇಶ ಹೊರಗಿನಮಠ ಇತರರು ಇದ್ದರು.
ಹುಬ್ಬಳ್ಳಿ: civil engineers ಇಲ್ಲಿಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಹುಬ್ಬಳ್ಳಿ ಶಾಖೆಗೆ ಎರಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಎಸಿಸಿಇಗೆ ಎಕ್ಸಲಂಟ್ ಇಂಪ್ಯಾಕ್ಟ್ ಅವಾರ್ಡ್ ಹಾಗೂ ಅಪ್ರಿಶಿಯೇಶನ್ ಅವಾರ್ಡ್ -2026 ಈ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಕೊಯಮುತ್ತೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನ್ಯಾಟ್ ಕಾನ್ 2026ರ ಸಮಾರಂಭದಲ್ಲಿ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳಿಗೆ ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲಬಾವಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಹುಬ್ಬಳ್ಳಿ ಶಾಖೆಯ ಚೇರ್ಮನ್ ಉಳವಪ್ಪ ಸುಣಗಾರ, ಕಾರ್ಯದರ್ಶಿ ಸಂಗಮೇಶ ಹೊರಗಿನಮಠ, ವಸಂತ ಪಾಲನಕರ, ಚಂದ್ರಶೇಖರ ಅಷ್ಟಗಿಮಠ, ಜುಂಜನ್ನವರ, ಇತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ನಿರಂತರ ಸೇವೆ, ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು, ಸಾರ್ವಜನಿಕರಿಗೆ ಅವಿರತ ಸೇವೆ ನೀಡುತ್ತಿದ್ದಾರೆ. ಈ ಪ್ರಶಸ್ತಿಯಿಂದ ಸಂಘಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗಿದೆ ಎಂದು ಪ್ರಕಟಣೆ ತಿಳಿಸಿದೆ.