ವಿಶ್ವ ತಾಯಂದಿರ ದಿನ ನಿಮಿತ್ತ ಹುಬ್ಬಳ್ಳಿಯ (city clinic) ಸಿಟಿ ಕ್ಲಿನಿಕ್‌ನಲ್ಲಿ 7 ಮತ್ತು 9 ತಿಂಗಳ ಗರ್ಭಿಣಿಯರಿಗೆ ವಿಶೇಷ ಆರೋಗ್ಯ ಜಾಗೃತಿ ಮತ್ತು ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಹುಬ್ಬಳ್ಳಿ: ವಿಶ್ವ ತಾಯಂದಿರ ದಿನ ನಿಮಿತ್ತ ಇಲ್ಲಿಯ ಮಾಧವಪುರದಲ್ಲಿರುವ (city clinic) ಸಿಟಿ ಕ್ಲಿನಿಕ್‌ನಲ್ಲಿ 7 ಮತ್ತು 9 ತಿಂಗಳ ಗರ್ಭಿಣಿಯರಿಗೆ ವಿಶೇಷ ಆರೋಗ್ಯ ಜಾಗೃತಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಡಾ. ವಿದ್ಯಾ ಜೋಶಿ ಮಾತನಾಡಿ, ಹೆರಿಗೆಯ ಬಳಿಕ ದೇಹದ ಪುನಶ್ಚೇತನ, ಸರಿಯಾದ ಆಹಾರ ಪದ್ಧತಿ, ವಿಶ್ರಾಂತಿ ಮತ್ತು ಮಾನಸಿಕ ನೆಮ್ಮದ ಅತ್ಯಗತ್ಯ ಎಂದರು.
ಡಾ. ಪ್ರಿಯಾ ಜೋಶಿ ಉದ್ಘಾಟಿಸಿ ಮಾತನಾಡಿ, ತಾಯಿಯ ಆರೋಗ್ಯವೇ ಮಗುವಿನ ಆರೋಗ್ಯದ ಮೂಲ. ಹಾಗಾಗಿ ತಾಯಂದಿರು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಗುವಿನ ಬೆಳವಣಿಗೆಯೂ ಉತ್ತಮವಾಗಿರಲಿದೆ ಎಂದರು.
ಡಾ. ಪೂಜಾ ಜೋಶಿ ಮಾತನಾಡಿ, ಗರ್ಭಿಣಿಯರು ನಿಯಮಿತವಾಗಿ ಎಎನ್‌ಸಿ ತಪಾಸಣೆ ಮಾಡಿಕೊಳ್ಳಬೇಕು. ರಕ್ತದ ಒತ್ತಡ, ಹಿಮೋಗ್ಲೋಬಿನ್‌ಮಟ್ಟ ಹಾಗೂ ಮಗುವಿನ ಬೆಳವಣಿಗೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.
ಡಾ. ಅಚಲಾ ಪೈ ಮಾತನಾಡಿ, ಮಗುವಿನ ಸಂಪೂರ್ಣ ಬೆಳವಣಿಗೆಗೆ ತಾಯಿ ಹಾಲು ಅತ್ಯುತ್ತಮ ಆಹಾರ ಎಂದರು.
ನಂತರ ನಡೆದ ಸಂವಾದದಲ್ಲಿ ಗರ್ಭಿಣಿಯರು ಮತ್ತು ತಾಯಂದಿರ ಪ್ರಶ್ನೆಗಳಿಗೆ ವೈದ್ಯರು ಸಮರ್ಪಕ ಉತ್ತರ ನೀಡಿದರು. ಗರ್ಭಾವಸ್ಥೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ, ಆಹಾರ ಪದ್ಧತಿ, ವ್ಯಾಯಾಮ, ಔಷಧೋಪಚಾರ ಮತ್ತು ಹೆರಿಗೆಗೆ ಸಂಬಂಧಿಸಿದ ಹಲವು ಅನುಮಾನಗಳಿಗೆ ತಜ್ಞರು ಉತ್ತರ ನೀಡಿದರು. ಇದು ತಾಯಂದಿರಿಗೆ ಆತ್ಮವಿಶ್ವಾಸ ಮೂಡಿಸಿತು.
ಗರ್ಭಿಣಿಯರಿಗಾಗಿ ಬಲೂನ್ ಹಸ್ತಾಂತರ, ಲಿಂಬು, ಚಮಚ ಆಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಭಾಗವಹಿಸಿದ್ದ ತಾಯಂದಿರಿಗೆ ಉಡುಗೊರೆ ಕೊಡಲಾಯಿತು. ತಾಯಂದಿರ ದಿನ ನಿಮಿತ್ತ ಕೇಕ್ ಕತ್ತರಿಸಲಾಯಿತು. ಸಮೂಯ ಛಾಯಾಚಿತ್ರ ಸೆಷನ್ ಆಯೋಜಿಸಲಾಯಿತು.
ಡಾ. ಪ್ರಕಾಶ ಮಾಡಲಗೇರಿ ಅವರ ನೇತೃತ್ವದಲ್ಲಿ ವೈದ್ಯರು, ಅತಿಥಿಗಳನ್ನು ಸನ್ಮಾನಿಸಲಾಯಿತು. ಡಾ. ವಿದ್ಯಾ ಜೋಶಿ, ದಾದಿಯರಾದ ಹನ್ನಾ ಪೊತೆಗೋಳಿ, ಸಲೋಮಿ ಚಿಕ್ಕೋಡಿ ಅವರನ್ನು ಸನ್ಮಾನಿಸಲಾಯಿತು. ಸತೋಷ ಕುಲಕರ್ಣಿ ನಿರೂಪಿಸಿದರು.