ಹುಬ್ಬಳ್ಳಿಯಲ್ಲಿ (Chutuku saahitya)ಆಯೋಜಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಮಟ್ಟದ 14ನೇ ಸಮ್ಮೇಳನದ ಉದ್ಘಾಟನೆಯಲ್ಲಿ ಶಿವಶಂಕರ ಹಿರೇಮಠ, ಡಾ. ಶಾಂತಣ್ಣ ಕಡಿವಾಲ, ಕೃಷ್ಣಮೂರ್ತಿ ಕುಲಕರ್ಣಿ, ವಂದನಾ ರಮೇಶ, ಸುನಂದಾ ಶ್ಯಾಗೋಟಿ, ಇತರರು ಇದ್ದರು.
ಹುಬ್ಬಳ್ಳಿ:ಕನ್ನಡ ಕಟ್ಟುವ ಕಾರ್ಯದಲ್ಲಿ (Chutuku saahitya) ಗಟ್ಟಿತನದ ಅಗತ್ಯವಿದೆ. ಹೊಂದಾಣಿಕೆ ಮನೋಭಾವ ಭಾಷಾ ಬೆಳವಣಿಗೆ ವಿಷಯದಲ್ಲಿ ಆತಂಕವನ್ನು ಉಂಟು ಮಾಡಲಿದೆ ಎಂದು ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಹೇಳಿದರು.
ವಿದ್ಯಾನಗರದ ಕನಕದಾಸ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಟ್ಟದ 14ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು. ಕಚುಸಾಪ ಸರ್ಕಾರದ ಅನುದಾನ ಇಲ್ಲದೇ ಹೋದರೂ ಮಠಾಧೀಶರ, ಸಾಹಿತ್ಯಾಸಕ್ತರ ಸಹಕಾರದಿಂದ ನಾಡಿನ ಉದ್ದಗಲಕ್ಕೂ ನಾಡು ನುಡಿ ಸೇವೆಯಲ್ಲಿ ಸದಾ ಕಾರ್ಯನಿರತವಾಗಿದೆ. ಅಗತ್ಯದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟದ ಮನೋಭಾವ ಅಗತ್ಯ ಮತ್ತು ಅನಿವಾರ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಿಸಮನಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಒಳಗೊಂಡಿದೆ. ಮುಂಬರುವ ದಿನಗಳಲ್ಲಿ ಕಚುಸಾಪ ಸೇರಿದಂತೆ ಲೇಖಕಿಯರ ಸಂಘಕ್ಕೂ ಹೆಚ್ಚು ಅನುದಾನ ನೀಡುವ ಭರವಸೆ ನೀಡಿದರು.
ಡಾ. ಶಾಂತಣ್ಣ ಕಡಿವಾಲ ‘‘ನಮ್ಮನಿಮ್ಮೆಲ್ಲರ ಈತ-ಕೇಸಿಕೆ 72’ ಸಂಸ್ಮರಣ ಸಂಚಿಕೆ ಅನಾವರಣ ಮಾಡಿ ಮಾತನಾಡಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಕಚುಸಾಪಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದು ಹೇಳಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ರೂಪಾ ಜೋಶಿ ಕೃಷ್ಣಮೂರ್ತಿ ಕಾದಂಬರಿ ಕುರಿತು, ಪದ್ಮಜಾ ಉಮರ್ಜಿ ಚುಟುಕು ಶಾಯರಿ ಬಗ್ಗೆ ಉಪನ್ಯಾಸ ನೀಡಿದರು. ಮೃತ್ಯುಂಜಯ ಮಟ್ಟಿ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ವಂದನಾ ಕರಾಡೆ ಹಾಗೂ ತಂಡದವರು ನಾಡಗೀತೆ ಹಾಡಿದರು. ಶಿವಶಂಕರ ಹಿರೇಮಠ, ಕುಮಾರ ಬೆಕ್ಕೇರಿ, ಚನ್ನಬಸಪ್ಪ ಧಾರವಾಡಶೆಟ್ರು, ಕೃಷ್ಣಮೂರ್ತಿ ಕುಲಕರ್ಣಿ, ಶಾಂತಣ್ಣ ಕಡಿವಾಲ, ಮೃತ್ಯುಂಜಯ ಮಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರ ಬದಲು ತ್ರಿಭಾಷಾ ವ್ಯವಸ್ಥೆ ಹಾಗೂ ಪಠ್ಯದಲ್ಲಿ ಚಿತ್ರಕಲೆ, ಆಟ, ವ್ಯಾಯಾಮ ಅಳವಡಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಮ್ಮೇಳ ಕೈಗೊಂಡಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.