childrens painting ರಾಯಾಪುರ ಬಳಿಯ ಇಸ್ಕಾನ್ ದೇವಸ್ಥಾನದಲ್ಲಿ ಹು-ಧಾ ಪ್ರದೇಶದ ಶಾಲಾ ಮಕ್ಕಳಿಗಾಗಿ ಮಂಗಳವಾರ ಇಸ್ಕಾನ್ ಹೆರಿಟೇಜ್ ಫೆಸ್ಟ್
ಹುಬ್ಬಳ್ಳಿ: ಸಮೀಪದ ರಾಯಾಪುರ ಬಳಿಯ
ಇಸ್ಕಾನ್ ದೇವಸ್ಥಾನದಲ್ಲಿ ಹು-ಧಾ ಪ್ರದೇಶದ ಶಾಲಾ ಮಕ್ಕಳಿಗಾಗಿ ಮಂಗಳವಾರ ಇಸ್ಕಾನ್ ಹೆರಿಟೇಜ್ ಫೆಸ್ಟ್- 2026 ಸಮಾರಂಭವನ್ನು ಏರ್ಪಡಿಸಲಾಗಿತ್ತು.
ನಂದು ಕೆಮಿಕಲ್ಸ್ ಪ್ರೈ.ಲಿ. ಉಪಾಧ್ಯಕ್ಷೆ ಉಷಾ ಹೆಗಡೆ, ಧಾರವಾಡ ಜಿಲ್ಲಾ ಶಿಕ್ಷಣಾಧಿಕಾರಿ ರೂಪಾ ಪುರಮ್ಕರ್, ಇಸ್ಕಾನ್ ಹು-ಧಾ ಅಧ್ಯಕ್ಷ ರಾಜೀವಲೋಚನದಾಸ್ ನೇತೃತ್ವದಲ್ಲಿ ಸ್ಪರ್ಧೆಗೆ ಚಾಲನೆ ನೀಡಲಾಯಿತು.
5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಜರುಗಿತು. ಭಾಗವಹಿಸಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ, ಭಾಗವತ ಪುರಾಣದ ಪಾತ್ರಗಳನ್ನು ಚಿತ್ರಗಳ ಮೂಲಕ ಬಿಸಿದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಪ್ರಬಂಧ ಬರೆದರು. 4ರಿಂದ 6ನೇ ತರಗತಿಯ 90 ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯ (ಏಕವ್ಯಕ್ತಿ) ಪ್ರದರ್ಶಿಸಿದರು. ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಕ್ಕಳಿಗೆ ಶುಭಕೋರಿದರು.