ಹನುಮನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (School) ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಸಂತೆಯನ್ನು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಬಶೀರ್ ಅಹ್ಮದ ಮಾಳಗಿಮನಿ ಉಧ್ಘಾಟಿಸಿದರು. 
ಧಾರವಾಡ

ವ್ಯವಹಾರ ಜ್ಞಾನ ಮೂಡಿಸಿದ ಮಕ್ಕಳ ಸಂತೆ School

ಉಪ್ಪಿನಬೆಟಗೇರಿ: ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (School) ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಸಂತೆ ಗಮನ ಸೆಳೆಯಿತು.
ಮಕ್ಕಳಿಗೆ ದೈನಂದಿನ ವ್ಯವಹಾರದ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ದಿನಬಳಕೆಯ ವಸ್ತುಗಳು, ತರಕಾರಿಗಳು ಹಾಗೂ ಅಹಾರ ಸಾಮಗ್ರಿಗಳನ್ನು ಖುದ್ದಾಗಿ ತಾವೇ ತಯಾರಿಸಿಕೊಂಡು ಬಂದು ಪ್ರದರ್ಶಿಸಿ ಮಾರಾಟ ಮಾಡಲು ತಿಳಿಸಲಾಗಿತ್ತು.
ಸಂತೆಯ ವಿಶೇಷತೆ ಕುರಿತು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಬಶೀರ್ ಅಹ್ಮದ ಮಾಳಗಿಮನಿ ಮಾತನಾಡಿ, ಗ್ರಾಮದ ಜನರಿಗೆ ಶಾಲೆ ಮತ್ತು ಮಕ್ಕಳ ಬಗ್ಗೆ ಒಳ್ಳೆ ಸಂಬಂಧ ಬೆಳೆಯಬೇಕು ಎಂಬ ಉದ್ದೇಶದಿಂದ ಸಂತೆಯನ್ನು ಹಮ್ಮಿಕೊಂಡಿದ್ದು, ಇದರಿಂದ ಮಕ್ಕಳು ದೈನಂದಿನ ಬದುಕು ಯಾವ ರೀತಿ ಇರುತ್ತದೆ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಎಂಬ ತಿಳಿವಳಿಕೆ ಮಕ್ಕಳಿಗೆ ಅರಿವಾಗಲಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮೃತ್ಯುಂಜಯ ಯರಗಂಬಳಿಮಠ ಮಾತನಾಡಿ, ಇಂದಿನ ಈ ಸಂತೆ ಕಾರ್ಯಕ್ರಮದಿಂದ ಮಕ್ಕಳಿಗೆ ತೂಕ, ಲೆಕ್ಕದ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಸಂತೆಯಲ್ಲಿ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರು ಹೂವು, ತರಕಾರಿ, ಕಾಳು, ತಂಪು ಪಾನಿಯಮತ್ತಿತರ ವಸ್ತುಗಳನ್ನು ಮಾರುವ ಮತ್ತು ಕೊಳ್ಳುವ ದೃಶ್ಯ ಎಲ್ಲೆಡೆ ಕಂಡುಬಂದಿತು.
ಎಸ್‌ಡಿಎಂಸಿ ಸದಸ್ಯರಾದ ಹಿತೇಶ್ವರ ಹೊಸಮನಿ, ಪುಷ್ಪಾ ಅಷ್ಟಗಿ, ಕುಸುಮಾ ಮುಮ್ಮಿಗಟ್ಟಿ, ಲಕ್ಷ್ಮೀ ಹರಿಜನ, ಅಬ್ದುಲ್ಲಾ ಬಿಜಾಪೂರ, ಬಾಹುಬಲಿ ಛಬ್ಬಿ, ಪದ್ಮರಾಜ ಕಾಗಿ, ಪ್ರಕಾಶ ಹೂಗಾರ, ಅನೀಲ ಕಮ್ಮಾರ, ಸುಮಾ ದೊಡವಾಡ, ದೀಪಾ ಬೊಬ್ಬಿ, ಸವಿತಾ ವಿಭೂತಿಮಠ, ಸಿದ್ದನಗೌಡ ಪಾಟೀಲ, ಬಸವರಾಜ ಬೊಬ್ಬಿ, ಅಜೀತ ಛಬ್ಬಿ, ಶಾಲಾ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.