ನವನಗರದ ಚಿಕೇನಕೊಪ್ಪ (chikenakoppa) ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ನಾದ-ನಿನಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್.ಕೆ. ಜಂಗ್ಲಪ್ಪಗೌಡ್ರು, ಬಿ.ಎಂ. ದೊಡ್ಡಮನಿ ಉದ್ಘಾಟಿಸಿದರು. 
ಧಾರವಾಡ

(chikenakoppa) ಎಲ್ಲರ ಮೇಲಿದೆ ಕಲೆ ಉಳಿಸಿ, ಬೆಳೆಸುವ ಜವಾಬ್ದಾರಿ

ಹುಬ್ಬಳ್ಳಿ: ನಿನಾದ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನವನಗರದ ಚಿಕೇನಕೊಪ್ಪ (chikenakoppa) ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ನಾದ-ನಿನಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ನಿವೃತ್ತ ಪ್ರಾಚಾರ್ಯರಾದ ಎಸ್.ಕೆ. ಜಂಗ್ಲಪ್ಪಗೌಡ್ರು, ಬಿ.ಎಂ. ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾಪೋಷಕರು ಇರುವವರೆಗೆ ಕಲೆಯು ಜೀವಂತ ಇರಲಿದೆ. ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ ಎಂದರು.
ಅನಿತಾ ಹಿರೂರ ವಚನ ಸಂಗೀತ, ಚಿಕನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದ ಸಂಗೀತ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ, ಶ್ರೇಯಾ ಪಡಸಲಗಿ ದಾಸರ ಪದ, ಸ್ನೇಹ ಮತಾಲಿಕ್ ದೇಸಾಯಿ ಹಾಗೂ ತಂಡದವರಿಂದ ಭಾವಗೀತೆ ಸಂಗೀತ ಕಾರ್ಯಕ್ರಮ ನಡೆಯಿತು.