ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ (Charity lecture)ದಿ. ಈಶ್ವರಗೌಡ ಚನ್ನಪ್ಪಗೌಡ್ರ ಮತ್ತು ದಿ. ಯಲ್ಲಮ್ಮ ಚನ್ನಪ್ಪಗೌಡ್ರ ದತ್ತಿ ಉಪನ್ಯಾಸ ಹಾಗೂ ಜಾನಪದ ಕಾರ್ಯಕ್ರಮವನ್ನು ಹಿರಿಯ ರಂಗಕರ್ವಿು ವೀಣಾ ಅಠವಲೆ ಉದ್ಘಾಟಿಸಿದರು.
ಹುಬ್ಬಳ್ಳಿ: ಸಾಹಿತ್ಯ, ಸಂಗೀತವು (Charity lecture) ನಮ್ಮ ಆಂತರಿಕ ಬದುಕನ್ನು ಹಸನಗೊಳಿಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಂಚಾಲಕ ಮಹಾಂತಪ್ಪ ನಂದೂರ ಹೇಳಿದರು.
ಹುಬ್ಬಳ್ಳಿಯ ವಿಜಯನಗರದ ಅನಂತ ಪ್ರೇರಣಾ ಕೇಂದ್ರದಲ್ಲಿ ಶುಕ್ರವಾರ ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ್ದ ದಿ. ಈಶ್ವರಗೌಡ ಚನ್ನಪ್ಪಗೌಡ್ರ ಮತ್ತು ದಿ. ಯಲ್ಲಮ್ಮ ಚನ್ನಪ್ಪಗೌಡ್ರ ದತ್ತಿ ಉಪನ್ಯಾಸ ಹಾಗೂ ಜಾನಪದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗರತಿಯ ಹಾಡು, ಜನಪದ ಹಾಡುಗಳು ಹೆಣ್ಣಿನ ಅತಂತ್ರತೆಯ ಬಗ್ಗೆ ಮಾತನಾಡುತ್ತವೆ. ಸಾಹಿತ್ಯದ ಮರುಪರಿಶೀಲನೆ ನಡೆಯುವ ಅಗತ್ಯವಿದೆ ಎಂದರು.
ಉದ್ಘಾಟಿಸಿದ ಹಿರಿಯ ರಂಗಕರ್ವಿು, ನಿವೃತ್ತ ಶಿಕ್ಷಕಿ ವೀಣಾ ಅಠವಲೆ ಮಾತನಾಡಿ, ಹೆಣ್ಣಿಗೆ ಹೆಚ್ಚಿನ ಮಹತ್ವವನ್ನು ಕೊಡುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಿರುವುದು ಬಹಳ ಸಂತೋಷ. ನೇರಮಾತುಗಳನ್ನು ನಾವು ಅರ್ಥೈಸಿಕೊಂಡರೆ ಪ್ರೀತಿ ಅರ್ಥವಾಗುತ್ತದೆ. ಅವರ ಸ್ವಭಾವ ಹಾಗೆಯೇ ಬಿಡು ಅಂತ ಅರ್ಥೈಸಿಕೊಂಡು ಸುಮ್ಮನಿದ್ದರೆ ಎಲ್ಲವೂ ಶಾಂತವಾಗಿರುತ್ತದೆ ಎಂದರು.
ಪ್ರೊ. ಜಿ ವಿ ಚಿಕ್ಕಮಠ, ಸಂಧ್ಯಾ ದಿಕ್ಷೀತ, ರಾಚೋಟಪ್ಪ ಕುಬಸದ, ಅನಸೂಯಾ ಪಾಟೀಲ, ಶಕುಂತಲಾ ಹೂಗಾರ, ಉಮಾ ಸುತಗಟ್ಟಿ, ಶಾಂತಾ ನಾಡಿಗೇರ, ನೀಲಾ ಕುಬಸದ, ಬಸನಗೌಡ ಚನ್ನಪ್ಪಗೌಡರ, ಚಂದ್ರು ಕಬನೂರ, ವಂದನಾ ಕರಾಳೆ, ಚನ್ನಬಸಪ್ಪ ಹುರುಳಿ, ಜಯಶ್ರೀ ನಿಂಬರಗಿ, ಸುರೇಶ್ ಬಿನ್ನಾಳ, ರೇಣುಕಾ ದೇಸಾಯಿ, ಇತರರು ಇದ್ದರು.
ವಿದ್ಯಾ ವಂಟಮುರಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.