chandiyaga ಹುಬ್ಬಳ್ಳಿ ಸಮೀಪದ ತಡಸ ಕಮಲಾನಗರ ಶ್ರೀ ಕ್ಷೇತ್ರ ಪಂಚವಟಿಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಏರ್ಪಡಿಸಿದ್ದ ಶ್ರೀ ಚಂಡೀಯಾಗದಲ್ಲಿ ಸ್ವಾಮಿ ತೇಜಸಾನಂದಜೀ ಮಹಾರಾಜ್, ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಸ್ವಾಮಿ ಗಿರ್ವಾಣಾನಂದಜೀ ಮಹಾರಾಜ್, ಇತರರು ಪಾಲ್ಗೊಂಡಿದ್ದರು.
- ಲೋಕಕಲ್ಯಾಣಾರ್ಥ ಅಪಾರ ಭಕ್ತರಿಂದ ಸೇವೆ
- ತಡಸ ಸಮೀಪದ ಕಮಲಾನಗರ ಪಂಚವಟಿಯಲ್ಲಿ ಆಯೋಜನೆ
ಹುಬ್ಬಳ್ಳಿ: chandiyaga ಸಮೀಪದ ತಡಸ ಕಮಲಾನಗರದ ಶ್ರೀಕ್ಷೇತ್ರ ಪಂಚವಟಿಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಜಗನ್ಮಾತೆಯ ಪ್ರೀತ್ಯರ್ಥವಾಗಿ ಶ್ರೀಚಂಡೀಯಾಗವನ್ನು ಆಯೋಜಿಸಲಾಗಿತ್ತು.
ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದಜೀ ಮಹಾರಾಜ್ ಹಾಗೂ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಸ್ವಾಮಿ ಗಿರ್ವಾಣಾನಂದಜೀ ಮಹಾರಾಜ್ ಅವರ ಸಾನ್ನಿಧ್ಯ ಮತ್ತು ಅಪಾರ ಭಕ್ತ ಸಮೂಹದ ಮಧ್ಯೆ ಶ್ರೀಚಂಡೀಯಾಗ ಭಕ್ತಿಭಾವದಿಂದ ನಡೆಯಿತು.
ಸ್ವಾಮಿ ತೇಜಸಾನಂದಜೀ ಮಹಾರಾಜ್ ಅವರ ಭಗವನ್ನಾಮ ಸಂಕೀರ್ತನೆಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.
ಜಗನ್ಮಾತೆಯ ಪ್ರೀತ್ಯರ್ಥವಾಗಿ ಶ್ರೀಚಂಡೀಯಾಗವನ್ನು ಆಯೋಜಿಸಲಾಗಿದ್ದು, ತನ್ಮೂಲಕ ಲೋಕದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಮೇಲಿಂದ ಮೇಲೆ ದೇವತಾ ಕಾರ್ಯಗಳನ್ನು, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಕೌಶಲಗಳ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಎಲ್ಲರ ಸಹಾಯ ಸಹಕಾರ ಸದಾ ಇರಲಿ ಎಂದು ಶ್ರೀಗಳು ಹೇಳಿದರು.