chairperson ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಧಾರವಾಡ

chairperson ಸಭಾಪತಿ ಸ್ಥಾನದ ಘನತೆ ಉಳಿಸಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಆಗ್ರಹ
  • ಪಕ್ಷ ಭೇದ ಮರೆತು ನಾಡಿನ ಒಳಿತಿಗಾಗಿ ಚರ್ಚೆ

ಹುಬ್ಬಳ್ಳಿ: chairperson ಕರ್ನಾಟಕದ ವಿಧಾನ ಪರಿಷತ್​ಗೆ ಅದರದೇ ಆದ ಘನತೆ, ಗೌರವ ಇದೆ. ಅದು ಹಿರಿಯರ ಮನೆಯಾಗಿದೆ. ಚಿಂತಕರ ಚಾವಡಿ ಎಂದೇ ಕರೆಸಿಕೊಳ್ಳುವ ಇಲ್ಲಿ ಪಕ್ಷ ಭೇದ ಮರೆತು ಎಲ್ಲರೂ ನಾಡಿನ ಒಳಿತಿಗಾಗಿ ಚರ್ಚೆ ಮಾಡುತ್ತಾರೆ. ಅಂತಹ ಸಭೆಗೆ ಬಸವರಾಜ ಹೊರಟ್ಟಿ ಅವರು ಕಳಶಪ್ರಾಯರಾಗಿದ್ದು ಗಾಂಭಿರ್ಯದಿಂದ ಸಭೆ ನಡೆಸುತ್ತಿದ್ದರು. ಅವರ ಮೇಲೆ ಒತ್ತಡ ಹಾಕಿ ರಾಜೀನಾಮ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ಪಕ್ಷಪಾತ ಮಾಡದೇ ಸದನ ನಡೆಸುತ್ತಿದ್ದ ಹೊರಟ್ಟಿ ಅವರ ಅಧಿಕಾರಾವಧಿ ಪೂರ್ಣವಾಗುವ ವರೆಗೂ ತಡೆಯಬೇಕಿತ್ತು. ಇಷ್ಟೊಂದು ಆತುರದಲ್ಲಿ ಅವರ ರಾಜೀನಾಮೆಯನ್ನು ಒತ್ತಾಯಪೂರ್ವಕವಾಗಿ ಪಡೆದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ. ಅಲ್ಲದೇ ಪಕ್ಷದ ಲೆಟರ್​ ಹೆಡ್​ನಲ್ಲಿ ಮುಂದಿನ ಸಭಾಪತಿ ಆಗುವವರ ಹೆಸರು ಬರೆದು ಕಳುಹಿಸಿರುವುದು ಹಿಂದಿನ ಸತ್ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದರು.
ಮೇಲ್ಮನೆ ಕಲಾಪ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಇಂತಹ ಮನೆಯ ಮುಖ್ಯಸ್ಥರಾದ ಹೊರಟ್ಟಿ ಅವರನ್ನು ನಡೆಸಿಕೊಂಡ ರೀತಿ ಖೇದಕರವಾಗಿದೆ. ಸಿಎಂ ಡಿ.ಕೆ. ಶಿವಕುಮಾರ ಅವರು ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಹೊರಟ್ಟಿ ಅವರ ಮನವೊಲಿಸಿ ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಮನವಿ ಮಾಡಿ ಆ ಸ್ಥಾನ ಗೌರವ ಉಳಿಸಬೇಕು ಎಂದರು.
ರಮೇಶ ಧಾರವಾಡ, ಸಾದಿಕ್​ ಧಾರವಾಡ, ನವೀನಕುಮಾರ ಮಡಿವಾಳರ, ಮಂಜುನಾಥ ಉಪ್ಪಾರ ಗೋಷ್ಠಿಯಲ್ಲಿದ್ದರು.