ಇಬ್ಬರ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ cattle transport ಪ್ರಕರಣ
ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ 11 ಜಾನುವಾರು ಸಾಗಿಸುತ್ತಿದ್ದ (cattle transport) ಇಬ್ಬರ ವಿರುದ್ಧ ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾನುವಾರುಗಳನ್ನು ರಕ್ಷಿಸಲಾಗಿದೆ.
2 ವಾಹನಗಳ ಮಾಲೀಕರಾದ ರಸೂಲಸಾಬ್, ಇಜಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ನೇಕಾರನಗರ ಸರ್ಕಲ್ ಹತ್ತಿರ ಹಾಗೂ ಗಬ್ಬೂರ ಸರ್ವಿಸ್ ರಸ್ತೆಯಲ್ಲಿ ಎರಡು ವಾಹನ ಪತ್ತೆ ಮಾಡಿ, 11 ಜಾನುವಾರು, ವಾಹನ ವಶಕ್ಕೆ ಪಡೆಯಲಾಗಿದೆ. ಬುಡರಸಿಂಗಿಯ ಶಾಂತಿನಾಥ ಗೋ ಶಾಲೆಗೆ ಜಾನುವಾರುಗಳನ್ನು ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.