Caste abuse ಗೋಕುಲ ರೋಡ್ ಪೊಲೀಸ್ ಠಾಣೆ 
ಧಾರವಾಡ

Caste abuse ನಾಲ್ವರ ವಿರುದ್ಧ ಜಾತಿ ನಿಂದನೆ ಕೇಸ್

ಮರಿದೇವ ಹೂಗಾರ
ಹುಬ್ಬಳ್ಳಿ: ವಾಕರಸಾ ಸಂಸ್ಥೆಯ ಬಿಆರ್‌ಟಿಎಸ್ ಘಟಕದ ಸಹಾಯಕ ಲೆಕ್ಕಿಗ ಮಹಿಳೆಗೆ ಜಾತಿ ನಿಂದನೆ Caste abuse ಹಾಗೂ ಅವಾಚ್ಯವಾಗಿ ನಿಂದಿಸಿ, ಕೆಲಸಕ್ಕೆ ತೊಂದರೆಯಾಗಬಾರದಾದರೆ ಪ್ರತಿ ತಿಂಗಳು 5 ಸಾವಿರ ರೂ. ಕೊಡಬೇಕೆಂದು ಬೆದರಿಕೆ ಹಾಕಿದ ಆರೋಪದಡಿ ನಾಲ್ವರ ವಿರುದ್ಧ ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶ್ರೀಧರ, ಕೋಟೆಪ್ಪ, ವನಜಾಕ್ಷಿ, ಗಿರಿಜಾ ಎಂಬುವರ ವಿರುದ್ಧ ಶಾಂತಾ ಎಂಬುವವರು ದೂರು ನೀಡಿದ್ದಾರೆ.
ಮಹಿಳೆಗೆ ನಿತ್ಯ ಜಾತಿ ಹೆಸರಿನಲ್ಲಿ ನಿಂದನೆ ಮಾಡಿದ್ದಾರೆ. ನಿನಗೆ ಕೆಲಸ ಸರಿ ಬರುವುದಿಲ್ಲ ಎಂದು ಹೆದರಿಸಿ, ಏನೂ ಆಗಬಾರದೆಂದರೆ ತಿಂಗಳಿಗೆ 5 ಸಾವಿರ ರೂ. ಕೊಡುವಂತೆ 2025ರಿಂದ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.