case ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ. 
ಧಾರವಾಡ

ಪಾಲಿಕೆ ಆಯುಕ್ತ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಮೇಲೆ ಪ್ರಕರಣ case

ಪ್ರಮುಖ ಮುಖ್ಯಾಂಶಗಳು

  • ಪುಷ್ಕರಣಿ ಅತಿಕ್ರಮಣದ ವಿರುದ್ಧ ಹೈ ಕೋರ್ಟ್​ನಲ್ಲಿ ಶ್ರೀರಾಮ ಸೇನೆಯಿಂದ ಕೇಸ್
  • ಪುಷ್ಕರಣಿ ಇರುವ ಬಗ್ಗೆ ಸರ್ಕಾರ ಸರ್ವೆ ನಡೆಸಲಿ.
  • ಪುಷ್ಕರಣಿ ಇರುವ ದಾಖಲೆಯನ್ನು ಸ್ವತಃ ಪ್ರಾಚ್ಯವಸ್ತು ಇಲಾಖೆ ನೀಡಿದೆ
ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇವಸ್ಥಾನದ ಪುಷ್ಕರಣಿ ಅತಿಕ್ರಮಣದ ವಿರುದ್ಧ ಎಲ್ಲ ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಅಯೋಧ್ಯೆಯ ಶ್ರೀರಾಮ ಮಂದಿರ, ಮಥುರಾ, ತಾಜಮಹಲ್, ಕುತುಬ್ ಮಿನಾರ, ಕರ್ನಾಟಕದ ದತ್ತಪೀಠ, ಶ್ರೀರಂಗಪಟ್ಟಣದ ದೇವಸ್ಥಾನ, ಆಳಂದದ ದೇವಸ್ಥಾನ, ಬಸವಣ್ಣನವರ ಅನುಭವ ಮಂಟಪ ಹೀಗೆ ಮುಸ್ಲಿಂರು ಅನೇಕ ದೇವಸ್ಥಾನಗಳನ್ನು ಅತಿಕ್ರಮಣ ಮಾಡಿರುವುದು ಇತಿಹಾಸದಲ್ಲಿದೆ.

ಈಗ ದೇವಸ್ಥಾನದ ಪುಷ್ಕರಣಿ ಅತಿಕ್ರಮಣ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಧಾರವಾಡ ಜಿಲ್ಲೆಯ ಇತಿಹಾಸದ ಬಗ್ಗೆ ಪ್ರಾಚ್ಯವಸ್ತು ಇಲಾಖೆಯ ಗ್ರಂಥದಲ್ಲಿ ಭವಾನಿಶಂಕರ ದೇವಸ್ಥಾನದ ಆವರಣದಲ್ಲಿ ಪುಷ್ಕರಣೆ ಇರುವ ಬಗ್ಗೆ ದಾಖಲೆ ಇದೆ.

2017ರಲ್ಲಿ ಹಿಂದೂ ಸಂಘಟನೆ ಮಾಹಿತಿ ಹಕ್ಕು ಆಧಾರದಡಿ ಕೇಳಿದ್ದ ಅರ್ಜಿಯಲ್ಲಿಯೂ ಪುಷ್ಕರಣಿ ಇರುವ ದಾಖಲೆಯನ್ನು ಸ್ವತಃ ಪ್ರಾಚ್ಯವಸ್ತು ಇಲಾಖೆ ನೀಡಿದೆ ಎಂದು ತಿಳಿಸಿದರು.

ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದಿರುವ ಪ್ರಾಚ್ಯವಸ್ತು ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರು, ಪುಷ್ಕರಣಿ ಇರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ಆ ಜಾಗದಲ್ಲಿ ಪುಷ್ಕರಣಿ ಇರುವ ಬಗ್ಗೆ ಸರ್ಕಾರ ಸರ್ವೆ ನಡೆಸಲಿ. ಭೂಮಿಯನ್ನು ಅಗೆಯದೇ ತಂತ್ರಜ್ಞಾನದ ಮೂಲಕ ಸರ್ವೆ ಕಾರ್ಯ ನಡೆಸಬಹುದಾಗಿದೆ ಎಂದು ಹೇಳಿದರು.

ಪ್ರಾಚ್ಯವಸ್ತು ಇಲಾಖೆ ನಿಯಮಗಳ ಪ್ರಕಾರ ದೇವಸ್ಥಾನದ ಸುತ್ತಲಿನ 100 ಮೀಟರ್​ವರೆಗೆ ಯಾವುದೇ ಮನೆ ಅಥವಾ ಇನ್ನಿತರ ಕಟ್ಟಡಗಳು ಇರಬಾರದು.

100 ಮೀಟರ್​ವೊಳಗಿನ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸಿ, ದೇವಸ್ಥಾನದ ಸುತ್ತಲೂ ತಂತಿಬೇಲಿ ಹಾಕಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನದ ಗರ್ಭಗುಡಿ ಎದುರು ಮಾಂಸದ ಅಂಗಡಿ ಇದೆ. ದೇವಸ್ಥಾನದ 20 ಮೀಟರ್​ವೊಳಗೆ ಮುಸ್ಲಿಂ ವ್ಯಕ್ತಿಯ ಲೇತ್ ಮಷಿನ್ ಇದೆ. ಹಿಂದೂಗಳ ದೇವಸ್ಥಾನಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ.

ಪ್ರಾಚ್ಯವಸ್ತು ಇಲಾಖೆಗೆ ತನ್ನ ವ್ಯಾಪ್ತಿಗೆ ಸೇರಿರುವ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕೆಂಬ ಅರಿವು ಇಲ್ಲವೇ ? ಎಂದು ಪ್ರಶ್ನಿಸಿದರು.

ಮಾಂಸದ ಅಂಗಡಿ ಹಾಗೂ ಲೇಥ್ ಮಷಿನ್ ಅನ್ನು ತಕ್ಷಣ ತೆರವುಗೊಳಿಸಬೇಕು. ದೇವಸ್ಥಾನದ ಪುಷ್ಕರಣಿ ಅತಿಕ್ರಮಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.