campus drive ಹುಬ್ಬಳ್ಳಿಯ ಐಬಿಎಂಆರ್​ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಉದ್ಯೋಗ ಮೇಳ ಉದ್ಘಾಟನೆಯಲ್ಲಿ ಮಮತಾ ಸಿಎಸ್​. ಖಾನಾಪುರೆ, ವಿನಯಚಂದ್ರ ಮಹೇಂದ್ರಕರ, ವೆಂಕಟೇಶ ದೇಶಪಾಂಡೆ, ಡಾ. ಎಚ್​.ವಿ. ಬೆಳಗಲಿ, ಸುಮಾ ಮಹೇಂದ್ರಕರ, ರಾಜೇಂದ್ರ ಹೊಸಮಠ, ಇತರರು ಪಾಲ್ಗೊಂಡಿದ್ದರು. 
ಧಾರವಾಡ

campus drive ಕೌಶಲ ಬೆಳೆಸಿಕೊಂಡರೆ ಕೆಲಸ ಸುಲಭ

ಪ್ರಮುಖ ಮುಖ್ಯಾಂಶಗಳು

  • ಪ್ರಾಂಶುಪಾಲ ಮಮತಾ ಖಾನಾಪುರೆ ಅಭಿಮತ
  • ಐಬಿಎಂಆರ್​ನಲ್ಲಿ ಪ್ರಗತಿ ಉದ್ಯೋಗ ಮೇಳ ಉದ್ಘಾಟನೆ

ಹುಬ್ಬಳ್ಳಿ: campus drive

ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ಒಂದಷ್ಟು ಕೌಶಲ ಬೆಳೆಸಿಕೊಳ್ಳಬೇಕು, ಇದರಿಂದ ಆಧುನಿಕ ಜಗತ್ತಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹಳ ಅನುಕೂಲವಾಗುತ್ತದೆ. ಕೇವಲ ಅಂಕಗಳ ಮೇಲೆ ಬದುಕು ಕಟ್ಟಿಕೊಳ್ಳುವುದು ಕಷ್ಟ ಸಾಧ್ಯ ಎಂದು ಸರ್ಕಾರಿ ಪಾಲಿಟೆಕ್ನಿಕ್​ ಪ್ರಾಂಶುಪಾಲ ಮಮತಾ ಸಿ.ಎಸ್​. ಖಾನಾಪುರೆ ಅಭಿಪ್ರಾಯಪಟ್ಟರು.

ಇಲ್ಲಿಯ ವಿದ್ಯಾನಗರ ಐಬಿಎಂಆರ್​ ಕಾಲೇಜಿನಲ್ಲಿ ಐಬಿಎಂಆರ್​ ಸಮೂಹ ಸಂಸ್ಥೆಗಳು ಮತ್ತು ಆಕ್ಸ್​ಫರ್ಡ್​ ಪಾಲಿಟೆಕ್ನಿಕ್​ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ "ಪ್ರಗತಿ' 16ನೇ ಉದ್ಯೋಗ ಮೇಳ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಜ್ಞಾನ ಗಳಿಸಿರುತ್ತಾರೆ. ಅದನ್ನು ಪ್ರಚುರ ಪಡಿಸುವ ಕಲೆ ಗೊತ್ತಿರುವುದಿಲ್ಲ. ಇಂತಹ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗದಾತರು ಅಭ್ಯರ್ಥಿಗಳಿಂದ ಏನನ್ನು ಬಯಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಒಂದಷ್ಟು ತರಬೇತಿ ಪಡೆದು ಒಳ್ಳೆಯ ಉದ್ಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕೆಎಚ್​ಡಿಎಂನ ವೆಂಕಟೇಶ ದೇಶಪಾಂಡೆ ಮಾತನಾಡಿ, ಪದವಿ, ಸ್ನಾತಕೋತ್ತರ ಪದವಿ ನಂತರ ಅನೇಕರು ಉದ್ಯೋಗ ಬಯಸಿ ಹೊರ ಬರುತ್ತಾರೆ. ಅವರಿಗೆಲ್ಲ ಉದ್ಯೋಗಾವಕಾಶ ಒದಗಿಸುವುದು ಸವಾಲಿನ ಕೆಲಸ. ವಿದ್ಯಾರ್ಥಿಗಳು ಸಹ ಆತ್ಮವಿಶ್ವಾಸದೊಂದಿಗೆ ಕೆಲವು ಕೌಶಲಗಳನ್ನು ಬೆಳೆಸಿಕೊಂಡು ಕಂಪನಿಗಳ ಬೇಡಿಕೆಗೆ ತಕ್ಕಂತೆ ತಯಾರಾಗಬೇಕು ಎಂದು ಸಲಹೆ ನೀಡಿದರು.

ಅಭ್ಯರ್ಥಿಗಳಿಗೆ

ಅಭ್ಯರ್ಥಿಗಳಿಗೆ

ಬೆಂಗಳೂರು ನಂತರ ಹುಬ್ಬಳ್ಳಿ ಧಾರವಾಡದಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲ ಇದೆ. ಇದಕ್ಕಾಗಿ ಇಂತಹ ಮೇಳಗಳ ಮೂಲಕ ಅವರಿಗೆ ನೆರವಾಗುತ್ತಿದ್ದೇವೆ ಎಂದರು.
ಐಬಿಎಂಆರ್​ ಟ್ರಸ್ಟಿ ಸುಮಾ ಮಹೇಂದ್ರಕರ, ಅಣ್ಣಪ್ಪ ಕೊರವರ, ಡಾ. ಶಂಕರ ಚಕ್ರವರ್ತಿ, ರವಿ ಕಬ್ಬಿಣದ, ಬಿಂದು ಎಸ್​., ರಾಜೇಂದ್ರ ಹೊಸಮಠ, ಪ್ರೊ. ಸೌಜನ್ಯ, ಇತರರು ಇದ್ದರು.
ಪ್ರಿಯಾ ಎಲ್​. ಪ್ರಾರ್ಥನೆ ಹಾಡಿದರು. ಡಾ. ಇಗ್ನೇಶ ಸಕ್ರಿ ಸ್ವಾಗತಿಸಿದರು. ಸಂಯೋಜಕ ಡಾ. ವಿಕ್ರಮ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಸಮೀರ ಗುಡಿ ವಂದಿಸಿದರು.