- ಹುಬ್ಬಳ್ಳಿಯಲ್ಲಿ ಅದ್ದೂರಿ ಸಮಾರಂಭ
- ಡಾ. ಆರ್.ಎನ್. ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ:bunt sangha ಕಳೆದ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಬ್ಬಳ್ಳಿ- ಧಾರವಾಡ ಬಂಟರ ಸಂಘವು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಂಘದ 50 ವರ್ಷಗಳ ಸಾರ್ಥಕ ಪಯಣದ ಸ್ಮರಣಾರ್ಥ ಕಾರ್ಯಕ್ರಮವನ್ನು ಮಾ. 29ರಂದು ನಗರದ ನವೀನ್ ಹೋಟೆಲ್ನಲ್ಲಿ ವೈಭವದಿಂದ ಹಮ್ಮಿಕೊಳ್ಳಲಾಗಿದೆ.
ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ ಹಾಗೂ ಉದ್ಯಮಿ ಪ್ರಸನ್ನ ಶಂಕರ ಶೆಟ್ಟಿ ಭಾಗವಹಿಸಲಿದ್ದಾರೆ.
ಸಾಧಕರಾದ ಡಾ. ಎಂ. ಮೋಹನ್ ಆಳ್ವ, ಡಾ. ಕೆ. ಪ್ರಕಾಶ ಶೆಟ್ಟಿ ಮತ್ತು ಯು. ಸೀತಾರಾಮ ಶೆಟ್ಟಿ ಅವರಿಗೆ ಪ್ರತಿಷ್ಠಿತ ಡಾ. ಆರ್.ಎನ್. ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಡಾ. ಎಂ. ಮೋಹನ ಆಳ್ವ, ಆರ್.ಎನ್.ಎಸ್ ಸಮೂಹದ ಸತೀಶ ಆರ್.ಎನ್. ಶೆಟ್ಟಿ, ಎಂ.ಜಿ. ಗ್ರೂಪ್ನ ಡಾ. ಕೆ. ಪ್ರಕಾಶ ಶೆಟ್ಟಿ ಹಾಗೂ ಉದ್ಯಮಿ ಯು.ಬಿ. ಶೆಟ್ಟಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಂಟ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಉಪಾಧ್ಯಕ್ಷ ಕೆ. ಸುರೇಶ ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.