ಹುಬ್ಬಳ್ಳಿ: ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಗಿಲಾವ್ ಮಾಡುತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿಯ ಕೇಶ್ವಾಪುರದ ಸಭಾಷನಗರದಲ್ಲಿ ಸಂಭವಿಸಿದೆ.
ಗೋಪನಕೊಪ್ಪದ ಸಿದ್ದರಾಮನಗರದ ಮುದುಕಪ್ಪ ವಡ್ಡರ(49) ಮೃತರು. ಗಿಲಾವ್ ಮಾಡುವ ವೇಳೆ ಮಾಲೀಕರು ಹಾಗೂ ಇಂಜಿನಿಯರ್‌ಗಳು ಯಾವುದೇ ಸುರಕ್ಷತಾ ಸಾಮಗ್ರಿ ನೀಡದಿರುವುದರಿಂದ ಕೆಳಗೆ ಬಿದಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಹರೀಶ, ಸುರೇಶ, ದಿನೇಶ, ಪರಶುರಾಮ ಕಾರಣ ಎಂದು ಆರೋಪಿಸಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ವಿವರಿಸಲಾಗಿದೆ