Brite AI ಡಿಮ್ಯಾಂಡ್​ ಫಾರ್ಮ್ ಸಂಸ್ಥೆಯ ಸಹ-ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಲಿಂದ್​ ಕಟ್ಟಿ. 
ಧಾರವಾಡ

Brite AI ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಮಿಲಿಂದ್​ ಕಟ್ಟಿ ಸಲಹೆ
  • ಬ್ರೈಟ್ ಬಿಜಿನೆಸ್​ ಸ್ಕೂಲ್​ನಲ್ಲಿ ಎಐ ಸಂವಾದ
ಹುಬ್ಬಳ್ಳಿ: Brite AI ಇಂದಿನ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಹೇಗೆ ಎನ್ನುವ ಪ್ರಶ್ನೆಗಿಂತ ಏಕೆ ಎನ್ನುವ ಪ್ರಶ್ನೆಯನ್ನು ಕೇಳುವುದು ಹೆಚ್ಚು ಮಹತ್ವದ್ದಾಗಿದೆ. ಏಕೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವವರು ಜೀವನದಲ್ಲಿ ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆ ಹೊಂದಿರುತ್ತಾರೆ ಎಂದು ಡಿಮ್ಯಾಂಡ್​ ಫಾರ್ಮ್ ಸಂಸ್ಥೆಯ ಸಹ-ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಲಿಂದ್​ ಕಟ್ಟಿ ಹೇಳಿದರು.
ನಗರದ ಬ್ರೈಟ್ ಬಿಜಿನೆಸ್​ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ಎಐ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಎಂಬಿಎ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಶ್ನೆ ಕೇಳುವುದು ಒಂದು ಕೌಶಲವಾಗಿದ್ದು, ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನಾಧಾರಿತ ಜಗತ್ತಿನಲ್ಲಿ ವಿದ್ಯಾರ್ಥಿಗಳು ಬುದ್ಧಿವಂತಿಕೆಯ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಐ ಸ್ವತಃ ಯೋಚಿಸುವುದಿಲ್ಲ, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮುನ್ಸೂಚನೆ (ಪ್ರಿಡಿಕ್ಶನ್​) ನೀಡುತ್ತದೆ. ಮಾನವ ಚಿಂತನೆ ಮತ್ತು ಎಐ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಉತ್ತಮ ನಿರ್ಧಾರ ಕೈಗೊಳ್ಳಲು ಎಐ ಪರಿಣಾಮಕಾರಿ ಸಾಧನವಾಗಿದ್ದು, ವಿದ್ಯಾರ್ಥಿಗಳು ಕುತೂಹಲ, ಕಲಿಯುವ ಹಂಬಲ ಹಾಗೂ ಗೆಲ್ಲುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಿಡಾಕ್​ ಮಾಜಿ ನಿರ್ದೇಶಕ ಜೀವಣ್ಣವರ ಮಾತನಾಡಿ, ವಿದ್ಯಾರ್ಥಿಗಳು ನಿರೀಕ್ಷೆಗಿಂತ ಹೆಚ್ಚಿನ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ಆದರ್ಶ ಸೇವೆ ಸಲ್ಲಿಸಿದ ಹನುಮಂತನಂತೆ ಸಮರ್ಪಣಾ ಮನೋಭಾವ ಬೆಳೆಸಿಕೊಂಡರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಟ್​ ಬಿಜಿನೆಸ್​ ಸ್ಕೂಲ್​ ನಿರ್ದೇಶಕ ಡಾ. ಪ್ರಸಾದ ರೂಡಗಿ, ಕಲಿಕೆಯ ಪ್ರಕ್ರಿಯೆ ಎಂದಿಗೂ ಮುಗಿಯುವುದಿಲ್ಲ. ಸಾಧಕರ ಅನುಭವಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದು, ಯಶಸ್ವಿ ವೃತ್ತೀಜಿವನಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡಲಿವೆ ಎಂದು ಹೇಳಿದರು.