Bright MBA ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್​ ಸ್ಕೂಲ್​ ವಿದ್ಯಾರ್ಥಿ ಪುನಿತ್​ ಯಕ್ಕರನಾಳ ಅವರಿಗೆ ಡಾ. ಪ್ರಸಾದ ರೂಢಗಿ, ಯೋಗೇಶಕುಮಾರ ಅವರು ಆದೇಶ ಪ್ರತಿ ನೀಡಿದರು. 
ಧಾರವಾಡ

Bright MBA ಬ್ರೈಟ್ ಬಿಜಿನೆಸ್​ ಸ್ಕೂಲ್​ ವಿದ್ಯಾರ್ಥಿ ಸಾಧನೆ

ಹುಬ್ಬಳ್ಳಿ: Bright MBA ಇಲ್ಲಿಯ ಬ್ರೈಟ್​ ಬಿಜಿನೆಸ್​ ಸ್ಕೂಲ್​ನ ಎಂಬಿಎ ವಿದ್ಯಾರ್ಥಿಯು ಬ್ಯಾಂಕ್​ನಲ್ಲಿ ಅತಿ ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ.
2024-26ನೇ ಸಾಲಿನ ಎಂಬಿಎ ವಿದ್ಯಾರ್ಥಿ ಪುನೀತ್​ ಎಸ್​. ಯಕ್ಕರನಾಳ ಅವರು ತಮಿಳುನಾಡ ಮರ್ಕೆಂಟೈಲ್​ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕ ಗ್ರೇಡ್​ ಹುದ್ದೆ ಪಡೆದಿದ್ದು, ಅವರಿಗೆ ವಾರ್ಷಿಕ 13.96 ಲಕ್ಷ ರೂ. ವೇತನ ಪ್ಯಾಕೇಜ್​ ನೀಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಆಪ್ಟಿಟ್ಯೂಡ್​ ಟೆಸ್ಟ್​, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಸುತ್ತುಗಳನ್ನು ಒಳಗೊಂಡ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಪುನೀತ್​ ಉತ್ತೀರ್ಣರಾಗಿದ್ದಾರೆ. ಬ್ರೈಟ್​ ಬಿಜಿನೆಸ್​ ಸ್ಕೂಲ್​ನ ನಿರ್ದೇಶಕ ಡಾ. ಪ್ರಸಾದ ರೂಡಗಿ ಮತ್ತು ಉದ್ಯೋಗ ಅಧಿಕಾರಿ ಯೋಗೇಶ ಕುಮಾರ ಅವರು ಪುನೀತ್​ ಅವರಿಗೆ ಆಫರ್​ ಲೆಟರ್​ ಹಸ್ತಾಂತರಿಸಿದರು.