ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ :
session ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ನಾಯಕರು ಹಾಗೂ ನಾಯಕತ್ವದ ಉಳಿವಿಗಾಗಿ ಮಠಾಧೀಶ್ವರರ ಚಿಂತನ- ಮಂಥನ ಸಭೆಯನ್ನು ಆ. 25ರಂದು ಬೆಳಗ್ಗೆ 10 ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಬಂಜಾರ ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ, ಸಣ್ಣ ಸಮಾಜಗಳು ಒಗ್ಗಟ್ಟಾಗಿ, ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯಬೇಕು ಎಂಬ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಉದ್ಘಾಟಿಸುವರು.
ಯಾದಗಿರಿ ಜಿಲ್ಲೆಯ ಪ್ರಥಮ ಜಗದ್ಗುರು ವೇದವ್ಯಾಸ ಬ್ರರ್ಹ¾ ಪೀಠದ ಪೀಠಾಧ್ಯಕ್ಷ ಬ್ರರ್ಹ¾ ಶ್ರೀ ರಾಜು ಗುರುಸ್ವಾಮೀಜಿ, ಕಲಬುರ್ಗಿ ಜಿಲ್ಲೆಯ ಜಗದ್ಗುರು ಪೀಠದ ಜಗದ್ಗುರು ಶ್ರೀ ಭಗೀರಥಾನಂದಪುರಿ ಸ್ವಾಮೀಜಿ, ಶಾಹಾಬಾದನ ಕಾಶಿ ವಿಶ್ವನಾಥ ಮಂದಿರದ ಶ್ರೀ ಕೊಟ್ಟಿರೇಶ್ವರ ಸ್ವಾಮೀಜಿ,
ರಾಣೆಬೆನ್ನೂರು ಚೌಡಯ್ಯದಾನಪುರದ ಶ್ರೀ ಅಭಿನವ ಅಂಬಿಗರ ಚೌಡಯ್ಯ ಸ್ವಾಮೀಜಿ, ಹುಬ್ಬಳ್ಳಿಯ ಶಿಕ್ಕಲಿಗಾರ ಸಮಾಜದ ಶ್ರೀ ರಾಘವೇಂದ್ರ ಗುರೂಜಿ, ಕಲಬುರ್ಗಿ ಹೂಗಾರ ಸಮಾಜದ ಶ್ರೀ ಗುರುರಾಜೇಂದ್ರ ಸ್ವಾಮೀಜಿ, ಹುಲಗೂರು ಮಹಾಕಾಳಿ ಪೀಠದ ಶ್ರೀ ಮೌನೇಶ್ವರ ಸ್ವಾಮೀಜಿ, ರಾಣೆಬೆನ್ನೂರಿನ ಸ್ವಕುಳಸಾಲಿ ಸಮಾಜದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.
ಸಚಿವ ಸಂತೋಷ ಲಾಡ್, ಸಂಸದರಾದ ಯದುವೀರ ಒಡೆಯರ, ಕೋಟಾ ಶ್ರೀನಿವಾಸ ಪೂಜಾರ, ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ, ಅಶೋಕ ಕಾಟವೆ ಹಾಗೂ ಇನ್ನಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಾಜದ ಅಭಿವೃದ್ಧಿಗಾಗಿ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ತೆಗೆದುಕೊಂಡು, ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.