book release ಹುಬ್ಬಳ್ಳಿಯ ಭವಾನಿನಗರ ರಾಯರ ಮಠದಲ್ಲಿ ಗುರುವಾರ "ಶ್ರೀ ರಾಘವೇಂದ್ರ ಅಷ್ಟೋತ್ತರ ಮಾಲಿಕೆ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವೇಣುಗೋಪಾಲ ಆಚಾರ್, ಗುರುರಾಜ ಆಚಾರ್ ಸಮಗಾ, ಆರ್.ಆರ್. ಗಂಡಮಾಲಿ, ಟಿ.ಎಮ್. ಬೀದರಳ್ಳಿ, ಇತರರು ಇದ್ದರು.
ಹುಬ್ಬಳ್ಳಿ: book release ಶ್ರೀಗುರು ರಾಘವೇಂದ್ರ ಅಷ್ಟೋತ್ತರ ಮಂಡಳಿ ಹಾಗೂ ಶ್ರೀ ವಿಠಲ ಭಜನಾ ಮಂಡಳಿಯ 3ನೇ ಆವೃತಿ "ಶ್ರೀ ರಾಘವೇಂದ್ರ ಅಷ್ಟೋತ್ತರ ಮಾಲಿಕೆ' ಪುಸ್ತಕವನ್ನು ಇಲ್ಲಿಯ ಭವಾನಿನಗರದ ರಾಯರ ಮಠದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಅತಿಥಿಗಳಾಗಿದ್ದ ವೇಣುಗೋಪಾಲ ಆಚಾರ್, ಗುರುರಾಜ ಆಚಾರ್ ಸಮಗಾ ಅವರು, ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಮಹಾತ್ಮೆಅಪಾರ, ಅವರ ದಿವ್ಯ ಪ್ರಭಾವದಿಂದ ಮಹಿಮಾ ವಿಶೇಷದಿಂದ ಕರುಣಾ ಕಟಾಕ್ಷದಿಂದ ಎಷ್ಟೋ ವ್ಯಾಧಿಗಳು, ಮಹಾರೋಗಗಳು ಪರಿಹಾರವಾಗಿವೆ. ಈಗಲೂ ಆಗುತ್ತಲಿವೆ. ಮಾನವ ಜಾತಿಯ ಎಲ್ಲ ಪಂಗಡದವರನ್ನೂ ಸಮಾನವಾಗಿ ಅನುಗ್ರಹಿಸುತ್ತ, ಬೇಡಿದ ವರವನ್ನು ಕೊಡುವ ಕರುಣಾಮೂರ್ತಿ ರಾಯರು ಎಂದು ಹೇಳಿದರು.
ಅಷ್ಟೋತ್ತರ ಮಂಡಳಿಯು ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇದೀಗ ಸಹಸ್ರ ಅಷ್ಟೋತ್ತರದತ್ತ ಸಾಗುತ್ತಿದೆ. ರಾಯರ ಅಷ್ಟೋತ್ತರವನ್ನು ಪ್ರತಿ ಭಾನುವಾರ ಭಕ್ತರ ನಿವಾಸದಲ್ಲಿ, ಗುರುವಾರ ರಾಯರ ಮಠದಲ್ಲಿ ಹಾಗೂ ವಿಠಲ ಭಜನೆಯನ್ನು ಪ್ರತಿ ಭಾನುವಾರ ಸಂಜೆ ಮನೆ/ದೇವಸ್ಥಾನದಲ್ಲಿ ನೆರವೇರಿಸಲಾಗುತ್ತಿದೆ ಎಂದರು.