BOI staff ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಕೆ. ಕಾಂಬಳೆ, ಇತರರು ಮಾಹಿತಿ ನೀಡಿದರು. 
ಧಾರವಾಡ

BOI staff ಎಸ್ಸಿ ಎಸ್ಟಿ ಒಬಿಸಿ ನೌಕರರ ಮಹಾಸಭೆ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್​ ಆಫ್ ಇಂಡಿಯಾ ರಾಜ್ಯ ಘಟಕದಿಂದ ಆಯೋಜನೆ
  • ನೌಕರರ ಕಲ್ಯಾಣ ಯೋಜನೆಗಳ ಸುಧಾರಣೆ
ಹುಬ್ಬಳ್ಳಿ: BOI staff ಅಖಿಲ ಭಾರತ ಬ್ಯಾಂಕ್​ ಆಫ್ ಇಂಡಿಯಾ ಎಸ್ಸಿ, ಎಸ್ಟಿ ಹಾಗೂ ಒಬಿಸಿ ನೌಕರರ ಸಂಘದ ಕರ್ನಾಟಕ ರಾಜ್ಯ ಘಟಕದ ತ್ರೈವಾರ್ಷಿಕ ಮಹಾಸಭೆ ಹಾಗೂ ಸಾಮಾನ್ಯ ಸಭೆಯು ಫೆ. 28ರಂದು ಬೆಳಗ್ಗೆ 10ಕ್ಕೆ ನಗರದ ಗೋಕುಲ ರಸ್ತೆ ಫಾರ್ಚೂನ್ ಪಾರ್ಕ್​ ಹೋಟೆಲ್​ನಲ್ಲಿ ಏರ್ಪಡಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಕೆ. ಕಾಂಬಳೆ ಅವರು, ರಾಜ್ಯದಲ್ಲಿ ಸಂಘಟನೆಯ ಸುಮಾರು 800 ಜನ ಸದಸ್ಯರನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಸದಸ್ಯರು ಪಾಲ್ಗೊಳ್ಳುವರು.
ಕಳೆದ ಮೂರು ವರ್ಷಗಳಲ್ಲಿ ಸಂಘದ ಚಟುವಟಿಕೆಗಳು ಹಾಗೂ ಪ್ರಮುಖ ಸಾಧನೆಗಳ ವರದಿ ಮಂಡನೆಯಾಗಿ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚೆ ನಡೆಯಲಿದೆ. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಅಂಚಿನ ಸಮುದಾಯಗಳಿಗೆ ಸೇರಿದ ನೌಕರರ ಕಲ್ಯಾಣ ಯೋಜನೆಗಳ ಸುಧಾರಣೆ, ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡ ಹೆಚ್ಚುತ್ತಿದ್ದು, ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದು, ಹೀಗೆ ಹಲವಾರು ನೌಕರ ಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಈಗಾಗಲೇ ಮ್ಯಾನೇಜ್​ಮೆಂಟ್​ ಗಮನಕ್ಕೆ ತರಲಾಗಿದ್ದು, ಅವುಗಳ ಸಮರ್ಪಕ ಜಾರಿ ಬಗ್ಗೆ ಗಹನ ಚರ್ಚೆ ನಡೆಯಲಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ಆರ್​.ಎಂ. ಖಾಪರ್ಡೆ, ರಾಜ್ಯ ಘಟಕದ ಅಧ್ಯಕ್ಷ ಬಿ. ಕೃಷ್ಣ, ಪ್ರಧಾನ ಕಾರ್ಯದರ್ಶಿ ಬಿ. ಪರಶುರಾಮ, ಇತರರು ಇದ್ದರು.