ಶವ ಪತ್ತೆ 
ಧಾರವಾಡ

Tibetan ಟಿಬೆಟ್ ಮೂಲದ ವ್ಯಕ್ತಿಯ ಶವ ಪತ್ತೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ಬೈಪಾಸ್ ಬಳಿಯ ಹಳಿಯಾಳ ರೋಡ್ ಕೆಳಸೇತುವೆ ಬಳಿ ಟಿಬೆಟ್ (tibetan) ಮೂಲದ ವ್ಯಕ್ತಿಯ ಶವಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಟಿಬೆಟ್ ಮೂಲದ ಥಾಶಿ ದೊಂಡು (39) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಮುಂಡಗೋಡದಲ್ಲಿ ವಾಸವಾಗಿದ್ದ.
ಬುಧವಾರ ಮಧ್ಯಾಹ್ನ ಶವ ನೋಡಿದ ಸ್ಥಳೀಯರು ಅಪಘಾತ ಇರಬಹುದು ಎಂದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಬೇರೆ ಕಡೆ ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಹಾಕಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಥಾಶಿ ದೊಂಡು ಅವರ ಸಂಬಂಧಿಕರು ಮುಂಡಗೋಡದಿಂದ ಸ್ಥಳಕ್ಕೆ ಆಗಮಿಸಿದ್ದರು. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಶವ ರವಾನಿಸಲಾಗಿದೆ. ಪ್ರಕರಣದ ಕುರಿತು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್‌ಪಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ.