ರಾಷ್ಟ್ರೆೊತ್ಥಾನ ರಕ್ತ ಕೇಂದ್ರದಿಂದ ಆರಂಭಿಸಲಾದ ರಕ್ತದೂತ ಸೇವಾ ನೂತನ ಸೇವೆಯನ್ನು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ದ್ವಿಚಕ್ರ ವಾಹನದ ಕೀಲಿ ಮಾದರಿಯನ್ನು ಹಸ್ತಾಂತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಉಪ ಮೇಯರ್ ಸಂತೋಷ ಚವ್ಹಾಣ, ಡಾ. ವಿ.ಎಸ್.ವಿ. ಪ್ರಸಾದ, ವೀರೇಂದ್ರ ಛೇಡಾ, ಇತರರು ಇದ್ದರು. 
ಧಾರವಾಡ

ರಕ್ತದೂತ ಸೇವಾ ಲೋಕಾರ್ಪಣೆ (launched)

ಆನಂದಕುಮಾರ ಅಂಗಡಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಷ್ಟ್ರೆೊತ್ಥಾನ ರಕ್ತ ಕೇಂದ್ರವು ನಿಸ್ವಾರ್ಥವಾಗಿ ಕಾರ್ಯ ಮಾಡುತ್ತಿದೆ ಎಂದು ಪ್ರಶಂಸಿದರು.
ಟಿವಿಎಸ್ ಇವಿ ದ್ವಿಚಕ್ರ ವಾಹನ ಮತ್ತು ಸೆಲ್ಪಿ ಸ್ಟ್ಯಾಂಡ್ ಕೊಡುಗೆಯಾಗಿ ನೀಡಿದ ಸ್ವರ್ಣ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ ಹಾಗೂ ಕಟ್ಟಡ ದಾನಿ, ಉದ್ಯಮಿ ವೀರೇಂದ್ರ ಛೇಡಾ ಅವರನ್ನು ಸನ್ಮಾನಿಸಲಾಯಿತು.
ರಕ್ತ ಕೇಂದ್ರದ ವೈದ್ಯ ಡಾ. ಎಸ್.ಎಸ್. ಸಂಗೊಳ್ಳಿ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಪ್ರಕಾಶ ಕ್ಯಾರಕಟ್ಟಿ, ಶರಣು ಅಂಗಡಿ, ರಕ್ತ ಕೇಂದ್ರದ ತಾಂತ್ರಿಕ ಮೇಲ್ವಿಚಾರಕ ನವೀನ ಚಿಕ್ಕಮಠ, ಶಿಬಿರ ಆಯೋಜಕ ಸಿದ್ದು ಅಂಗಡಿ, ಇತರರು ಇದ್ದರು.