ಹುಬ್ಬಳ್ಳಿಯ ಚೇತನ ಎಂಬಿಎ, ಚೇತನ ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ (blood) ಶಿಬಿರವನ್ನು ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು.  
ಧಾರವಾಡ

(blood) ದಾನಗಳಲ್ಲಿ ರಕ್ತ ದಾನ ಶ್ರೇಷ್ಠ

ಹುಬ್ಬಳ್ಳಿ: ದಿ. ಮೂರುಸಾವಿರಪ್ಪ ಸಂಗಪ್ಪಣ್ಣ ಕೊರವಿ 86ನೇ ಜನ್ಮ ದಿನ ನಿಮಿತ್ತ ನಗರದ ಚೇತನ ಎಂಬಿಎ, ಚೇತನ ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ರಾಷ್ಟ್ರೋತ್ಥಾನ ರಕ್ತ ನಿಧಿ ಸಹೋಗದಲ್ಲಿ ಮಂಗಳವಾರ ರಕ್ತದಾನ (blood) ಶಿಬಿರ ಏರ್ಪಡಿಸಲಾಗಿತ್ತು.
ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ರಕ್ತದಾನ ಶ್ರೇಷ್ಠ. ರಕ್ತ ದಾನ ಮಾಡುವುದರಿಂದ ಮೂರು ಜೀವ ಉಳಿಸಬಹುದು. ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು. ಜತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ರಕ್ತ ದಾನದ ಮಹತ್ವವನ್ನು ಜಗತ್ತಿಗೆ ಸಾರಬೇಕು. ಶಿಕ್ಷಣದ ಮುಖಾಂತರ ಸಾಮಾಜಿಕ ಮೌಲ್ಯ ಎತ್ತಿ ಹಿಡಿಯಬೇಕು ಎಂದರು.
ಚೇತನ ಸಂಸ್ಥೆಯ ನಿರ್ದೇಶಕ ಡಾ.ವಿಶ್ವನಾಥ ಕೊರವಿ ಮಾತನಾಡಿ, ಚೇತನ ಮಹಾವಿದ್ಯಾಲಯವು ಕಳೆದ 15 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತ ಬಂದಿದೆ. ಇಂದಿನ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಕ್ತ ದಾನ ಮಾಡಲು ಹೆಸರು ನೋಂದಾಯಿಸಿದ್ದರು ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್ ಹುಬ್ಬಳ್ಳಿ ಶಾಖೆಯ ರಾಘವೇಂದ್ರ ರಾವ್, ರಾಷ್ಟ್ರೋತ್ಥಾನ ರಕ್ತ ಭಂಡಾರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಪ್ರೊ.ಕೆ.ಎಸ್. ಕೌಜಲಗಿ, ಡಾ. ರಮಾಕಾಂತ ಕುಲಕರ್ಣಿ, ಪ್ರಾಚಾರ್ಯರಾದ ಡಾ. ಅಶೋಕ ವಡಕಣ್ಣವರ, ಡಾ.ಕೆ.ಸಿ. ಪಾಂಗಿ, ಎನ್‌ಎಸ್‌ಎಸ್ ಘಟಕದ ಸಂಯೋಜಕರಾದ ಪ್ರೊ. ಮೈಲಾರ, ಪ್ರೊ. ವೀಣಾ, ಪ್ರೊ. ಶ್ವೇತಾ, ಪ್ರೊ. ಯಶೋಧ ನಾಯಕ, ಉಪಸ್ಥಿತರಿದ್ದರು. ಪ್ರೊ. ಭಾಗ್ಯಶ್ರೀ ಬಳಿಗಾರ ನಿರೂಪಿಸಿದರು.