blood camp ಹುಬ್ಬಳ್ಳಿಯ ವರೂರ ವಿಆರ್​ಎಲ್​ ಮುಖ್ಯ ಕಚೇರಿಯಲ್ಲಿ ಶುಕ್ರವಾರ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜನ್ಮದಿನ ನಿಮಿತ್ತ ಏರ್ಪಡಿಸಿದ್ದ ಶಿಬಿರದಲ್ಲಿ ಸಿಬ್ಬಂದಿ ರಕ್ತದಾನ ಮಾಡಿದರು. ಎಸ್​.ಜಿ. ಪಾಟೀಲ, ಅಮರ ಸೂಜಿ, ವಿದ್ಯಾಧರ ಯಲಗಚ್ಚ, ಮಂಜುನಾಥ ಹೊಂಬಳ, ನಿತಿನ್​ ಶೆಣೈ ಇತರರು ಇದ್ದರು. 
ಧಾರವಾಡ

blood camp ವರೂರಿನಲ್ಲಿ ರಕ್ತದಾನ ಶಿಬಿರ

ಹುಬ್ಬಳ್ಳಿ: blood camp ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​, ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯ ಸಂಕೇಶ್ವರ ಅವರ 76ನೇ ಜನ್ಮದಿನದ ಅಂಗವಾಗಿ ಶುಕ್ರವಾರ ವರೂರಿನ ವಿಆರ್​ಎಲ್​ ಮುಖ್ಯ ಕಚೇರಿಯಲ್ಲಿ ರಕ್ತದಾನ ಶಿಬಿರ

ಏರ್ಪಡಿಸಲಾಗಿತ್ತು.

ರೋಟರಿ ಕ್ಲಬ್​ ಆಫ್ ಹುಬ್ಬಳ್ಳಿ, ವಿಆರ್​ಎಲ್​ ಲಾಜಿಸ್ಟಿಕ್ಸ್​ ಲಿಮಿಟೆಡ್​ ಹಾಗೂ ರಾಷ್ಟ್ರೊತ್ಥಾನ ಬ್ಲಡ್​ ಬ್ಯಾಂಕ್​ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿಆರ್​ಎಲ್​ ಸಿಬ್ಬಂದಿ ಉತ್ಸಾಹದಿಂದ ರಕ್ತದಾನ ಮಾಡಿದರು.

ಒಟ್ಟು 222 ಯೂನಿಟ್​ಗಳಷ್ಟು ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ಸಿಬ್ಬಂದಿಗೆ ಕೃತಜ್ಞತೆಯ ಸಂಕೇತವಾಗಿ ಹಣ್ಣುಗಳು ಹಾಗೂ ಉಪಹಾರವನ್ನು ನೀಡಲಾಯಿತು.
ವಿಆರ್​ಎಲ್​ ಲಾಜಿಸ್ಟಿಕ್ಸ್​ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್​.ಜಿ. ಪಾಟೀಲ ಅವರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ನಿತಿನ್​ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್​ ಕಾರ್ಯದರ್ಶಿ ಅಮರ ಸೂಜಿ, ಸದಸ್ಯರಾದ ವಿದ್ಯಾಧರ ಯಲಗಚ್ಚ, ಸುಭಾಷ್​ಚಂದ್ರ ಹೊಳಲ, ವಸಂತ ಭಸ್ಮೆ, ಜಯೇಶ್​ ಇರಕಲ್​, ರಾವೇಂದ್ರ ಜೀವಣ್ಣವರ, ಪ್ರಕಾಶ ರಾವ್​, ಮೋಹಿತ್​ ದಂಡ್​, ಸಮುದಾಯ ಸೇವಾ ನಿರ್ದೇಶಕ ಮಂಜುನಾಥ ಹೊಂಬಳ ಉಪಸ್ಥಿತರಿದ್ದರು.