ಉದ್ಯಮಿ ಕಮಲ್ ಮೆಹತಾ ಜನ್ಮದಿನ ನಿಮಿತ್ತ blood campಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 
ಧಾರವಾಡ

blood camp ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ

ಹುಬ್ಬಳ್ಳಿ: ಉದ್ಯಮಿ ಕಮಲ್ ಮೆಹತಾ ಜನ್ಮದಿನ ನಿಮಿತ್ತ ರಾಷ್ಟ್ರೋತ್ಥಾನ ರಕ್ತ ಭಂಡಾರ blood camp ಸಹಯೋಗದಲ್ಲಿ ಇಲ್ಲಿಯ ದೇಶಪಾಂಡೆ ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ವಿವೇಕಾನಂದ ಆಸ್ಪತ್ರೆ ಆಡಳಿತಾಧಿಕಾರಿ ಡಾ. ರಾಹುಲ್ ಮುಂಗೇಕರ ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ. ನಿಯಮಿತವಾಗಿ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು ಎಂದು ಸಲಹೆ ನೀಡಿದರು.
ರಾಷ್ಟ್ರೋತ್ಥಾನ ರಕ್ತ ಭಂಡಾರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಡಾ. ಮಂಜುಳಾ ಹುಗ್ಗಿ ಮಾತನಾಡಿದರು.
ಶಿಬಿರ ಸಂಯೋಜಕ ಸಿದ್ದು ಅಂಗಡಿ, ಇತರರಿದ್ದರು.