ಕುಂದಗೋಳ ತಾಲೂಕಿನ ನೂಲ್ವಿ ಗ್ರಾಮದ ಕರಡಿಕೊಪ್ಪ ರಸ್ತೆಯಲ್ಲಿರುವ ವಿಭವ ಇಂಡಸ್ಟ್ರೀಸ್ ಪ್ರೈ.ಲಿ. ಬ್ಲಾಕ್‌ನಂ. 721ರಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ (blood)ಮಾಡಿದರು. 
ಧಾರವಾಡ

(blood) ರಕ್ತದಾನದಿಂದ ಉಳಿಯಲಿದೆ ಜೀವ

ಹುಬ್ಬಳ್ಳಿ: ರಾಷ್ಟ್ರೋತ್ಥಾನ ರಕ್ತ ಭಂಡಾರ ಸಹಯೋಗದಲ್ಲಿ ಕುಂದಗೋಳ ತಾಲೂಕಿನ ನೂಲ್ವಿ ಗ್ರಾಮದ ಕರಡಿಕೊಪ್ಪ ರಸ್ತೆಯಲ್ಲಿರುವ ವಿಭವ ಇಂಡಸ್ಟ್ರೀಸ್ ಪ್ರೈ.ಲಿ. ಬ್ಲಾಕ್‌ನಂ. 721ರಲ್ಲಿ ಶನಿವಾರ ಬೃಹತ್ ರಕ್ತದಾನ (blood) ಶಿಬಿರ ಏರ್ಪಡಿಸಲಾಗಿತ್ತು.
ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉದ್ಯಮಿ ಎಚ್.ಎನ್. ನಂದಕುಮಾರ ಉದ್ಘಾಟಿಸಿ ಮಾತನಾಡಿ, ಕೆಲ ಸಂದರ್ಭದಲ್ಲಿ ರಕ್ತದ ಅಗತ್ಯ ಇರುತ್ತದೆ. ಆದರೆ, ಸರಿಯಾದ ಸಮಯಕ್ಕೆ ರಕ್ತ ದೊರೆಯದೇ ಇದ್ದರೆ ರೋಗಿಯ ಪ್ರಾಣಕ್ಕೆ ಕುತ್ತು ಬರುತ್ತದೆ. ಒಂದು ಯುನಿಟ್ ರಕ್ತವು ಮೂರು ಜೀವಗಳನ್ನು ಉಳಿಸುತ್ತದೆ. ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ತಿಳಿವಳಿಕೆ ನೀಡಿದರು.
ಸಿಒಒ ಉದಯ ಬಾಡ್ಕರ್, ಎವಿಪಿ ಮಾರ್ಕೆಟಿಂಗ್ ಆದಿತ್ಯ, ಶಿಬಿರ ಸಂಯೋಜಕ ಸಿದ್ದು ಅಂಗಡಿ ಇತರರು ಇದ್ದರು.