(bike theft) ಯಮಹಾ ಆರ್‌ಎಕ್ಸ್ 100 ಬೈಕ್‌ಗಳ ಸರಣಿ ಕಳ್ಳತನ 
ಧಾರವಾಡ

(bike theft) 7 ಬೈಕ್ ಕದ್ದಿದ್ದವ ಲಾಕ್...

ಹುಬ್ಬಳ್ಳಿ: ಯಮಹಾ ಆರ್‌ಎಕ್ಸ್ 100 ಬೈಕ್‌ಗಳ ಸರಣಿ ಕಳ್ಳತನ (bike theft) ಪ್ರಕರಣವನ್ನು ಇಲ್ಲಿಯ ವಿದ್ಯಾನಗರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಭೈರಿದೇವರಕೊಪ್ಪ ನಿವಾಸಿ ಪ್ರಕಾಶ ಪರಸನ್ನವರ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 9 ಲಕ್ಷ ರೂ. ಮೌಲ್ಯದ 7 ಯಮಹಾ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ, ಕೇಶ್ವಾಪುರ, ನವನಗರ ಸೇರಿ ಹಲವೆಡೆ ಪ್ರಕಾಶ ಬೈಕ್ ಕಳವು ಮಾಡಿದ್ದ. ದಾಂಡೇಲಿಯಲ್ಲಿಯೂ ಬೈಕ್ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸ್ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದೆ.