bike rally ಭಗತ್ ಸಿಂಗ್ ಸೇವಾ ಸಂಘದ ಅಧ್ಯಕ್ಷ ವಿಶಾಲ ಜಾಧವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹುಬ್ಬಳ್ಳಿ: bike rally ಇಲ್ಲಿಯ ಜೆ.ಸಿ. ನಗರದ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ. 15ರಂದು ಬೆಳಗ್ಗೆ 10.30ಕ್ಕೆ ತಿರಂಗಾ ತವರಿನಲ್ಲಿ ತ್ರಿವರ್ಣ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವಿಶಾಲ ಜಾಧವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಸುಗಲ್ ರಸ್ತೆಯಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಕೇಶ್ವಾಪುರ ವೃತ್ತ, ಕಾನ್ವೆಂಟ್ ಶಾಲೆ, ಸ್ಟೇಶನ್ ರಸ್ತೆ, ಮರಾಠಾ ಗಲ್ಲಿ, ಕೊಪ್ಪಿಕರ ರಸ್ತೆ, ಮಹಾನಗರ ಪಾಲಿಕೆ ಎದುರಿನಿಂದ ಕಿತ್ತೂರ ರಾಣಿ ಚನ್ನಮ್ಮ ವೃತ್ತ ತಲುಪಿ ಸಮಾರೋಪಗೊಳ್ಳಲಿದೆ ಎಂದರು.
ಬೈಕ್ ರ್ಯಾಲಿಯಲ್ಲಿ ಸುಮಾರು 700 ರಿಂದ 800 ಜನ ಬೈಕ್ ಸವಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದಾಜು 5 ಕಿ.ಮೀ. ವರೆಗೆ ನಡೆಯುವ ರ್ಯಾಲಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಹೆಲ್ಮೇಟ್ ಧರಿಸಲಿದ್ದಾರೆ ಎಂದು ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಹುಬ್ಬಳ್ಳಿಯ ಆರಾಧ್ಯದೈವ ಶ್ರೀ ಸಿದ್ಧಾರೂಢ ಮಠದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಶ್ರೀಮಠದ ಗೋ ಶಾಲೆ ಹಾಗೂ ಪುಷ್ಕರಣೆ ಸ್ವಚ್ಛತಾ ಕಾರ್ಯಕ್ರಮವನ್ನು ಆ. 23ರಂದು ನಡೆಸಲಾಗುವುದು ಎಂದರು.
ರಂಗಾನಾಯಕ ತಪೇಲಾ, ಹರೀಶ ಸರ್ವಳೆ, ಮಹೇಶ ತಪೇಲಾ, ಅಭಿಷೇಕ ಕಲಾಲ ಗೋಷ್ಠಿಯಲ್ಲಿದ್ದರು.