bhavadeepa school ಹುಬ್ಬಳ್ಳಿಯ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ಭಾವದೀಪ ಶಿಕ್ಷಣ ಸಂಸ್ಥೆಯ bhavadeepa school ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಡಾ. ಎಸ್. ರಾಧಾಕೃಷ್ಣನ್ ಜನ್ಮ ದಿನ ನಿಮಿತ್ತ ಶಿಕ್ಷಕರ ದಿನವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಶಿಕ್ಷಕಿ ಧನ್ಯಾ ಪೈ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಯ್ಕೆ ಮಾಡಲಾಯಿತು.
ಹತ್ತನೇ ತರಗತಿಯ ಮಕ್ಕಳು ನೃತ್ಯ, ಹಾಡುಗಳ ಮೂಲಕ ಶಿಕ್ಷಕರೆಲ್ಲರನ್ನು ರಂಜಿಸಿದರು.
ನಂತರ ಶಿಕ್ಷಕರಿಗೆ ಕೆಲವು ಆಟೋಟಗಳ ಸ್ಪರ್ಧೆ ಆಯೋಜಿಸಲಾಗಿತ್ತು.
ನಂತರ ರಾಯರ ಮಠದ ಆವರಣದಲ್ಲ್ಲಿ ಸಸಿನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
ಎಲ್ಲ ಗುರುಗಳಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶಾಲೆಯ ಆಡಳಿತ ಮಂಡಳಿಯ ಖಜಾಂಚಿ ಕನಕಗಿರಿ ರಘೋತ್ತಮರಾವ್, ಸದಸ್ಯರಾದ ಶ್ರೀರಂಗ ಹನುಮಸಾಗರ, ಕಿರಣ ಅಡವಿ, ಪ್ರಾಚಾರ್ಯ ಎಂ.ಕೆ. ಹಿರೇಮಠ, ಮುಖ್ಯೋಪಾಧ್ಯಾಯಿನಿ ಅನಿತಾ ಬಾಗಲಕೋಟ, ಸಿಬ್ಬಂದಿ ಇತರರಿದ್ದರು.
ಅಮರಾದಿತ್ಯ ರಂಜನ್, ಅಮೋಘ ಶಿರೋಳ್ ನಿರೂಪಿಸಿದರು. ಸಮರ್ಥ ಜೋಶಿ ಸ್ವಾಗತಿಸಿದರು. ಸಾತ್ವಿಕ್ ರಟ್ಟಿಹಳ್ಳಿ ವಂದಿಸಿದರು.