ಭಟ್ಕಳದಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಕುಮಟಾದ ಸವಿತಾ ಅಂಬಿಗ ಅವರಿಗೆ ಬಂಗಾರದ ಆಭರಣವನ್ನು ಆಟೋ ಚಾಲಕ ತೆಂಗಿನಗುಂಡಿಯ ಮೋಹನ ನಾಯ್ಕ ಮರಳಿ ನೀಡಿದರು. ಮಂಜುನಾಥ ಗೌಡರ ಇದ್ದರು. 
ಧಾರವಾಡ

ಭಟ್ಕಳದಲ್ಲಿ ಚಿನ್ನದ ಆಭರಣ ಮರಳಿ ನೀಡಿದ ಆಟೋ ಚಾಲಕ gold

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಪ್ರಮುಖ ಮುಖ್ಯಾಂಶಗಳು

  • ರಿಕ್ಷಾದಲ್ಲಿ ಎಂಟು ತೊಲ ಚಿನ್ನದ ಸರ ಬಿಟ್ಟು ಹೋಗಿದ್ದ ಮಹಿಳೆ
ಭಟ್ಕಳ: ಆಟೋದಲ್ಲಿ ಬಿಟ್ಟು ಹೋಗಿದ್ದ ಎಂಟು ತೊಲ ಬಂಗಾರದ ಆಭರಣಗಳಿದ್ದ ಬ್ಯಾಗ್ ಅನ್ನು ಚಾಲಕ ಮರಳಿ ಪ್ರಯಾಣಿಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಕುಮಟಾ ನಿವಾಸಿ ಸವಿತಾ ಮಹಾಬಲೇಶ್ವರ ಅಂಬಿಗ ಅವರು ಹೆಬಳೆಯಿಂದ ಭಟ್ಕಳ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಆಗಮಿಸಿದ್ದರು. ಕುಮಟಾಕ್ಕೆ ತೆರಳುವ ಆತುರದಲ್ಲಿ ತಮ್ಮ ಬ್ಯಾಗ್ ಅನ್ನು ಆಟೋದಲ್ಲೇ ಮರೆತು ಹೋಗದ್ದರು. 
ಬ್ಯಾಗ್‌ನಲ್ಲಿ ಬಟ್ಟೆಗಳ ಜತೆಗೆ ಅಂದಾಜು ಎಂಟು ತೊಲ ಬಂಗಾರದ ಆಭರಣಗಳಿದ್ದವು. ಬ್ಯಾಗ್ ಕಳೆದಿರುವ ಕುರಿತ ಮಾಹಿತಿಯನ್ನು ಪೊಲೀಸರ ವಾಟ್ಸ್ ಆ್ಯಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿತ್ತು. ಮಾಹಿತಿ ಗಮನಿಸಿದ ಆಟೋ ಚಾಲಕ, ತೆಂಗಿನಗುಂಡಿ ನಿವಾಸಿ ಮೋಹನ  ತಿಮ್ಮಪ್ಪ ನಾಯ್ಕ, ತಕ್ಷಣ ತಮ್ಮ ಆಟೋ ಪರಿಶೀಲಿಸಿದಾಗ ಬ್ಯಾಗ್ ಪತ್ತೆಯಾಗಿದೆ. ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಬ್ಯಾಗ್ ಅನ್ನು ಹಸ್ತಾಂತರಿಸಿದರು. ಎಎಸ್‌ಐ ಮಂಜುನಾಥ ಗೌಡರ ಅವರ ಮೂಲಕ ಬ್ಯಾಗ್ ಅನ್ನು ಅದರ ಮಾಲಕಿ ಸವಿತಾ ಮಹಾಬಲೇಶ್ವರ ಅಂಬಿಗ ಅವರಿಗೆ ವಾಪಸ್ ನೀಡಿದರು. ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಮೋಹನ ತಿಮ್ಮಪ್ಪ ನಾಯ್ಕ ಅವರ ಕಾರ್ಯಕ್ಕೆ ಪೊಲೀಸರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.