ವಿದುಷಿ ಸುಷ್ಮಾ ಕೊಂಗಿ ಹಾಗೂ ವಿದುಷಿ ನಿಸರ್ಗ ಗೊಡ್ಡೆಮ್ಮಿ ಅವರ ಭರತ ನಾಟ್ಯ (bharatanatya)
ಹುಬ್ಬಳ್ಳಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಹುಬ್ಬಳ್ಳಿ ಶಾಖೆ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜ. 10ರಂದು ಸಂಜೆ 4.30ಕ್ಕೆ ವಿದುಷಿ ಸುಷ್ಮಾ ಕೊಂಗಿ ಹಾಗೂ ವಿದುಷಿ ನಿಸರ್ಗ ಗೊಡ್ಡೆಮ್ಮಿ ಅವರ ಭರತ ನಾಟ್ಯ (bharatanatya) ರಂಗ ಪ್ರವೇಶ ಕಾರ್ಯಕ್ರಮ ಏರ್ಪಾಟಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ, ಪ್ರದೀಪ ಶರ್ಮಾ ಅತಿಥಿಗಳಾಗಿ ಆಗಮಿಸುವರು. ಹಿಮ್ಮೇಳದಲ್ಲಿ ಡಾ. ಸಹನಾ ಭಟ್ಟ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ, ವಿದ್ವಾನ್ ವಿದ್ಯಾ ಶಂಕರ, ವಿದ್ವಾನ್ ಅರುಣಕುಮಾರ, ವಿದ್ವಾನ್ ರಘು ಸಿಂಹ ಭಾಗವಹಿಸುವರು ಎಂದರು.
ಕಲಾವಿದರು ಪುಷ್ಪಾಂಜಲಿ, ಅಲಾರಿಪು, ಗಣೇಶಸ್ತುತಿ, ಶಿವಸ್ತುತಿ, ವರ್ಣ, ತಿಲ್ಲಾನ ಪ್ರಸ್ತುತಪಡಿಸುವರು. ನಾನು ರಚಿತ ‘ನರಸಿಂಹ’ ವಿಶೇಷ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಗುರು ಡಾ. ಸಹನಾ ಭಟ್ಟ ಅವರಿಗೆ ಗುರುವಂದನೆಯನ್ನೂ ಕಲಾವಿದರು ಸಲ್ಲಿಸುವರು ಎಂದರು.
ವಿದುಷಿ ಸುಷ್ಮಾ ಕೊಂಗಿ ಹಾಗೂ ವಿದುಷಿ ನಿಸರ್ಗ ಗೊಡ್ಡೆಮ್ಮಿ ಸುದ್ದಿಗೋಷ್ಠಿಯಲ್ಲಿದ್ದರು.