ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ (Bhajane)ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿದರು. ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯಕ, ಗೀತಾ ಕಲಬುರ್ಗಿ ಇದ್ದರು. 
ಧಾರವಾಡ

ರಾಜ್ಯ ಮಟ್ಟದ (Bhajane) ಭಜನಾ ಸ್ಪರ್ಧೆ 29ರಿಂದ

ಸಂತೋಷ ವೈದ್ಯ
ಹುಬ್ಬಳ್ಳಿ: ನಗರದ ಪ್ರಸಿದ್ಧ (Bhajane)ಶ್ರೀ ಸಿದ್ಧಾರೂಢ ಸ್ವಾಮಿಯವರ ಜಯಂತ್ಯುತ್ಸವದ ಅಂಗವಾಗಿ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಮಾ. 29 ರಿಂದ ಏ.3ರ ವರೆಗೆ ರಾಜ್ಯ ಮಟ್ಟದ 11ನೇ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಠದ ಧರ್ಮದರ್ಶಿ ಹಾಗೂ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ತಿಳಿಸಿದರು.
ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ಬೆಳಗ್ಗೆ 11.30ಕ್ಕೆ ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಸ್ಪರ್ಧೆಗೆ ಚಾಲನೆ ನೀಡುವರು. ಕಳೆದ ವರ್ಷ ಸ್ಪರ್ಧೆಯಲ್ಲಿ 136 ತಂಡಗಳು ಭಾಗವಹಿಸಿದ್ದವು. ಈ ಭಾರಿ ಸುಮಾರು 150 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪ್ರತಿಯೊಂದು ತಂಡದಲ್ಲಿ 6ರಿಂದ 10 ಜನರು ಇರಬೇಕು. ಪ್ರತಿ ತಂಡಕ್ಕೆ ಮೂರು ಪದಗಳನ್ನು ಹಾಡುವ ಅವಕಾಶ ನೀಡಲಾಗುವುದು. ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬೇಕು. ಮೂರನೇ ಪದ್ಯವನ್ನು ಜಗದ್ಗುರು ಶ್ರೀ ಸಿದ್ಧಾರೂಢರ ಮೇಲೆ ಅಥವಾ ದಾಸಸಾಹಿತ್ಯ, ತತ್ವಪದ ಹಾಗೂ ವಚನ ಸಾಹಿತ್ಯದ ಮೇಲೆ ಹಾಡಬಹುದು ಎಂದು ವಿವರಿಸಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 1.11 ಲಕ್ಷ ರೂ., ದ್ವಿತೀಯ 90 ಸಾವಿರ ರೂ. ಹಾಗೂ ತೃತೀಯ 80 ಸಾವಿರ ರೂ. ಬಹುಮಾನವಾಗಿ ನೀಡಲಾಗುವುದು. ಹತ್ತು ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ತಲಾ 10 ಸಾವಿರ ರೂ., 16 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ತಂಡಕ್ಕೆ ತಲಾ 11 ಸಾವಿರ ರೂ. ಮತ್ತು ಒಂದು ಮಹಿಳಾ ಭಜನಾ ತಂಡಕ್ಕೆ 11 ಸಾವಿರ ರೂ. ಬಹುಮಾನ ನೀಡಲಾಗುವುದು. ಜತೆಗೆ ವೈಯಕ್ತಿಕ ಬಹುಮಾನವಾಗಿ ಉತ್ತಮ ಹಾಡುಗಾರರಿಗೆ, ಉತ್ತಮ ಹಾರ್ವೇನಿಯಂ ವಾದಕರಿಗೆ, ಉತ್ತಮ ತಬಲಾ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಉತ್ತಮ ಧಮಡಿ ವಾದಕರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.