Bhagini school ಹುಬ್ಬಳ್ಳಿಯ ನವನಗರದ ಭಗಿನಿ ನಿವೇದಿತಾ ಶಾಲೆಯ ವಾರ್ಷಿಕೋತ್ಸವದಲ್ಲಿ ಅತಿಥಿಗಳಾಗಿದ್ದ ಸು. ರಾಮಣ್ಣ, ಉದ್ಯಮಿ ನಿಂಗಣ್ಣ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಜಿ.ಎಲ್​. ರಾಜಬನ್ಸಿ, ರಾಜು ಹೈಬತ್ತಿ, ಕರವೀರಪ್ಪ ಮಡಿವಾಳರ, ಬಿ.ಟಿ. ಪೋಳ, ಈಶ್ವರ ಮಾಳಣ್ಣವರ, ಇತರರು ಇದ್ದರು. 
ಧಾರವಾಡ

Bhagini school ಮಕ್ಕಳು ದಾರಿ ತೋರುವವರಾಗಬೇಕು

ಪ್ರಮುಖ ಮುಖ್ಯಾಂಶಗಳು

  • ಆರ್​ಎಸ್​ಎಸ್​ ಜೇಷ್ಠ ಪ್ರಚಾರಕ ಸು. ರಾಮಣ್ಣ ಅಭಿಮತ
  • ಭಗಿನಿ ನಿವೇದಿತಾ ಶಾಲೆ ವಾರ್ಷಿಕೋತ್ಸವ
ಶಿಕ್ಷಕರು ತರಗತಿಯಲ್ಲಿರುವ ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ಪಾಲಕರು ತಮ್ಮ ಜವಾಬ್ದಾರಿ ಅರಿಯಬೇಕು. ಶಾಲೆಯು ನಡೆಯಬೇಕಾದುದು ಪರಿವಾರ ಎಂಬ ಭಾವದಿಂದ ಎಂದು ಹೇಳಿದರು.
ಇಂಗ್ಲೆಂಡ್​ನಲ್ಲಿ ಹುಟ್ಟಿ ಬೆಳೆದ ಮಿಸ್​ ಮಾರ್ಗರೇಟ್​ ಭಾರತಕ್ಕೆ ಬಂದು ಭಗಿನಿ ನಿವೇದಿತಾ ಆಗಿ ಪರಿವರ್ತನೆಯಾದ ಬಗೆಯನ್ನು ವಿವರಿಸಿದರು.
ಉದ್ಯಮಿ ನಿಂಗಣ್ಣ ಬಿರಾದಾರ ಮಾತನಾಡಿ, ಭಗಿನಿ ನಿವೇದಿತಾ ಶಾಲೆಯಲ್ಲಿ ಕಲಿಸುವ ಶಿಕ್ಷಣದ ಜೊತೆಗಿನ ಸಂಸ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಸ್ಮಿತಾ ಕುಲಕರ್ಣಿ, ಸದಸ್ಯರಾದ ಜಿ.ಜಿ. ಹೆಗಡೆ, ಈಶ್ವರ ಮಾಳಣ್ಣವರ, ಸತೀಶ, ಶ್ರೀಧರ ಇತರರು ಪಾಲ್ಗೊಂಡಿದ್ದರು.