ಹುಬ್ಬಳ್ಳಿಯ ನವನಗರದ ಭಗಿನಿ ನಿವೇದಿತಾ bhagini nivedita ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಮಣ್ಣಿನ ಎತ್ತುಗಳನ್ನು ಮಂಗಳವಾರ ಪ್ರದರ್ಶಿಸಲಾಯಿತು.
ಹುಬ್ಬಳ್ಳಿ: ಇಲ್ಲಿಯ ನವನಗರದ ಭಗಿನಿ ನಿವೇದಿತಾ bhagini nivedita ವಿದ್ಯಾಲಯದಲ್ಲಿ ಮಂಗಳವಾರ ಮಣ್ಣೆತ್ತಿನ ಅಮಾವಾಸ್ಯೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಾಲಕೃಷ್ಣ ಕುಲಕರ್ಣಿ ಮಾತನಾಡಿ, ಮಣ್ಣೆತ್ತಿನ ಅಮಾವಾಸ್ಯೆಯು ಕೇವಲ ಆಚರಣೆಯಲ್ಲ; ಇದು ಮಣ್ಣಿನ ಫಲವತ್ತತೆ ಮತ್ತು ಜೀವವೈವಿಧ್ಯತೆಯನ್ನು ಗೌರವಿಸುವ ಅದ್ಭುತ ಹಬ್ಬ. ರಾಸಾಯನಿಕ ಮುಕ್ತ ಪ್ರಕೃತಿ ಮತ್ತು ಮೂಕಪ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸುವ ಈ ಪರಂಪರೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಈಶ್ವರ ಮಾಳಣ್ಣನವರ ಮಾತನಾಡಿದರು.
ಕರವೀರಪ್ಪ ಮಡಿವಾಳರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹನಾ ಓಂಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೇದಿತಾ ವಾಸ್ಟರ್ ಹಾಗೂ ಶ್ರಾವಣಿ ಕಂಬಾಳಿ, ಬಸವಣ್ಣನವರ ಕುರಿತು ಭಕ್ತಿ ಗೀತೆ ಹಾಡಿದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಮಣ್ಣಿನ ಎತ್ತುಗಳನ್ನು ಪ್ರದರ್ಶಿಸಿದರು.
ಮುಖ್ಯೋಪಾಧ್ಯಾಯ ರಾಜು ಹೈಬತ್ತಿ, ಶಿಕ್ಷಕಿಯರಾದ ಕಲಾವತಿ ಜೀರಗಿವಾಡ ಇತರರಿದ್ದರು.
ದೀಪಾ ಕಾಡರಕೊಪ್ಪ ಸ್ವಾಗತಿಸಿದರು. ವಿಜಯಲಕ್ಷ್ಮೀ ಹಿರೇಮಠ ನಿರೂಪಿಸಿದರು. ಸುಜಾತ ಬೆಟಗೇರಿ ವಂದಿಸಿದರು.