jnanloka ಹುಬ್ಬಳ್ಳಿಯ ಪ್ರಜಾಪಿತ ಬ್ರಹ್ಮಕುಮಾರೀಸ್​ ಭಗವದ್ಗೀತಾ ಜ್ಞಾನಲೋಕ ವೀಕ್ಷಣೆ ಮಾಡಿದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು. 
ಧಾರವಾಡ

jnanloka ಭಗವದ್ಗೀತಾ ಜಯಂತಿ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಜ್ಞಾನಲೋಕ ವೀಕ್ಷಿಸಿದ ವಿದ್ಯಾರ್ಥಿಗಳು
  • ಮೌಲ್ಯಗಳನ್ನು ಕಲಿಸಲು ಗೀತಾ ಜ್ಞಾನ ಅಗತ್ಯ
ಮಜೇಥಿಯಾ ಫೌಂಡೇಷನ್ ಚೇರ್ಮನ್​ ಜಿತೇಂದ್ರ ಮಜೇಥಿಯಾ ಕಾರ್ಯಕ್ರಮ ಉದ್ಘಾಟಿಸಿದರು. ವರ್ತಮಾನ ಸಮಯದಲ್ಲಿ ಮಾನವನ ಮನಸ್ಸು ಸಮಸ್ಯೆಗಳಿಂದ ತಲ್ಲಣಗೊಳ್ಳುತ್ತಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ತೃಪ್ತಿ ಇಲ್ಲದಾಗಿದೆ. ಭಗವದ್ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಒಂದೇ ಉದ್ದೇಶ ಇಟ್ಟುಕೊಳ್ಳದೇ ಏಕಾಗ್ರತೆ, ಧೈರ್ಯ, ಸಾಹಸ, ಪುರುಷಾರ್ಥಗಳಿಂದ ಭವಿಷ್ಯದ ಜೀವನಕ್ಕೆ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಬಿ.ಕೆ. ಡಾ. ಬಸವರಾಜ ರಾಜಋಷಿ ಪ್ರಾಸ್ತಾವಿಕ ಮಾತನಾಡಿ, ಇಂದಿನ ಭೌತಿಕ ವಿಜ್ಞಾನವನ್ನು ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದೆ. ಚಾರ್ಲಸ್​ ಡಾರ್ವಿನ್ ರ ಜೀವ ವಿಕಾಸವಾದ, ಆಧುನಿಕ ಮನಃಶಾಸ್ತ್ರ, ಮಾನವ ವಿಜ್ಞಾನ ಶಾಸ್ತ್ರ ಮುಂತಾದ ಶಿಕ್ಷಣದಲ್ಲಿ ಆತ್ಮದ ಅಸ್ತಿತ್ವವನ್ನು ತಿರಸ್ಕರಿಸಿದ ಶಿಕ್ಷಣ ನೀಡಲಾಗುತ್ತದೆ. ಆದ್ದರಿಂದ ಮಾನವನ ಜೀವನಕ್ಕೆ ಅಗತ್ಯವಿರುವ ನೈತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು ಇಲ್ಲವಾಗಿವೆ. ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆ ಬೋಧಿಸುವ ಅಧ್ಯಾತ್ಮ ಜ್ಞಾನ, ಯೋಗ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಂಜಯ ಪೀಠಾಪುರ ಮಾತನಾಡಿ, ಇಂದಿನ ಶಿಕ್ಷಣಕ್ಕೆ ಮೌಲ್ಯಗಳನ್ನು ಕಲಿಸಲು ಗೀತಾ ಜ್ಞಾನ ಅಗತ್ಯವಿದೆ. ಶಾಲೆ- ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಸ್ಪಿರಿಚ್ಯುವಲ್​ ಪಿಕ್ನಿಕ್​ಗಾಗಿ ಗೀತಾ ಜ್ಞಾನಲೋಕಕ್ಕೆ ಕರೆತರಬೇಕಾಗಿದೆ ಎಂದು ಹೇಳಿದರು.
ಶ್ರೀಧರಜೀ ಅವರು ಸ್ವಾಗತಿಸಿದರು. ಚಿನ್ಮಯಾ ಪಿಯು ಕಾಲೇಜು, ಮಹೇಶ ಪಿಯು ಕಾಲೇಜು, ಸಿ.ಬಿ. ಎಜುಕೇಶನ್​ ಇನ್​ಸ್ಟಿಟ್ಯೂಟ್​, ಕೆಎಲ್​ಇ ನರ್ಸಿಂಗ್ ಇನ್​ಸ್ಟಿಟ್ಯೂಟ್​ ವಿದ್ಯಾರ್ಥಿಗಳು ಭಾಗವಹಿಸಿದ್ದರು.