best professor ಜೀವಶಾಸ್ತ್ರ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ ಹುಬ್ಬಳ್ಳಿ ಆದರ್ಶ ಕಾಲೇಜಿನ ಪ್ರೊ. ರಂಜಿತಾ ತುಕ್ಕಣ್ಣವರ, ಪ್ರೊ. ಮಮತಾ ಮುಳಗುಂದ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಾವಕಾರ, ಡಾ. ಲಿಂಗರಾಜ ಮುಳ್ಳಳ್ಳಿ ಇತರರು ಇದ್ದರು. 
ಧಾರವಾಡ

best professor ಆದರ್ಶ ಕಾಲೇಜಿನ ಪ್ರಾಧ್ಯಾಪಕರಿಗೆ ಪುರಸ್ಕಾರ

ಹುಬ್ಬಳ್ಳಿ: best professor ಲಿಂಗರಾಜ ನಗರದ ಶ್ರೀ ಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಆದರ್ಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರೊ. ರಂಜಿತಾ ತುಕ್ಕಣ್ಣವರ ಮತ್ತು ಪ್ರೊ. ಮಮತಾ ಮುಳಗುಂದ ಅವರನ್ನು ಇತ್ತೀಚೆಗೆ ಧಾರವಾಡದ ವೈ.ಬಿ. ಅಣ್ಣಿಗೇರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಜೀವಶಾಸ್ತ್ರ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.
ಜೀವಶಾಸ್ತ್ರ ವಿಷಯದಲ್ಲಿ ಆದರ್ಶ ಕಾಲೇಜಿಗೆ 2025- 26 ಸಾಲಿನಲ್ಲಿಯೂ ದ್ವೀತಿಯ ಪಿಯುನಲ್ಲಿ ಶೇ. 100ರಷ್ಟು ಫಲಿತಾಂಶ ಲಭಿಸಿದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿಯರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಆದರ್ಶ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಎಂಎಲ್​ಸಿ ಲಿಂಗರಾಜ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ, ನಿರ್ದೇಶಕರಾದ ಪ್ರೊ. ಎಸ್​.ಬಿ. ಕುನ್ನೂರ, ಪ್ರೊ. ಬಿ.ಸಿ. ಗೌಡರ, ಪ್ರೊ. ಡೇನಿಯಲ್​ ಹೊಸಕೇರಿ ಮತ್ತು ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಮತ್ತು ಸಿಬ್ಬಂದಿಯವರು ಕಾಲೇಜು ವತಿಯಿಂದ ಅವರನ್ನು ಸತ್ಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹ ಸಾಧನೆಗೆ ಕಾರಣ ಎಂದರು.