bendre words ಹುಬ್ಬಳ್ಳಿಯ ವಿಶ್ವಶ್ರಮ ಚೇತನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಕೆ.ಎಸ್. ಶರ್ಮಾ ಮಾತನಾಡಿದರು. ಡಾ. ಶ್ರೀನಿವಾಸ ಬನ್ನಿಗೋಳ, ಸೋಮಶೇಖರ ಹುದ್ದಾರ, ಸಿ.ಸಿ. ಹಿರೇಮಠ, ಇತರರು ಇದ್ದರು.
ಹುಬ್ಬಳ್ಳಿ: bendre words ಡಾ. ದ.ರಾ. ಬೇಂದ್ರೆ ಅವರ ಒಂದೊಂದು ಚಿಂತನೆಯ ಸಾಲುಗಳು ವಿಶ್ವವನ್ನೇ ಬದಲು ಮಾಡುವಂತಹವು, ಬದಲಾವಣೆ ಮೂಲಕ ಸಮಾನ ಹೊಸ ವಿಶ್ವವನ್ನು ಸೃಷ್ಟಿಸುವ ಸಂದೇಶ ಸಾರಿದವರು, ಅವರಂತಹ ಮಹಾಕವಿ ಇನ್ನೊಬ್ಬರಿಲ್ಲ ಎಂದು ಹೋರಾಟಗಾರ, ಸಾಹಿತಿ ಡಾ. ಕೆ.ಎಸ್. ಶರ್ಮಾ ಹೇಳಿದರು.
ನಗರದ ಗೋಕುಲ ರಸ್ತೆಯ ಕೆ.ಎಸ್. ಶರ್ಮಾ ಕಾಲೇಜಿನ ವಿಶ್ವಶ್ರಮ ಚೇತನ ಕ್ಯಾಂಪಸ್ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಎಲ್ಲ ಪೀಳಿಗೆಗೂ ಅನ್ವಯ ಆಗುವ ಹಾಗೆ ಬೇಂದ್ರೆಯವರು ಬರೆದ ದುಡಿಯುವ ಬಡವರು ನಾಳಿನ ಒಡೆಯರು, ದುಡಿಯದ ಒಡೆಯರು ಹಾಳಾದ ಹಾದಿ ಹಿಡಿಯುವವರು, ಇದರ ಅರ್ಥ ವಿಶ್ವದಲ್ಲಿ ದುಡಿಯುವ ಸಾಮ್ರಾಜ್ಯ ಸ್ಥಾಪನೆಯಾಗಬೇಕು, ಬಡತನ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದಾಗಿತ್ತು ಎಂದರು.
ಸಮಗ್ರ ವಿಶ್ವದ ಒಳಿತಿಗಾಗಿ ಚಿಂತನೆ ಮಾಡಿದವರು ಬೇಂದ್ರೆಯವರು. ಅವರ ಸಮಗ್ರ ಸಾಹಿತ್ಯವನ್ನು ಈ ಕ್ಯಾಂಪಸ್ನಿಂದ ಪ್ರಕಟ ಮಾಡಿದ್ದು,ಅವರ ಚಿಂತನೆಗಳನ್ನು ಸಾಹಿತ್ಯದ ಮೂಲಕ ಅರಿತು ವಿಶ್ವಕ್ಕೆ ನೀಡುವ ಕೆಲಸವಾಗಬೇಕು ಎಂದರು.
ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ವಿವಿಧ ಸ್ಪರ್ಧೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆ.ಎಸ್.ಶರ್ಮಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ "ಜೀವ ಸಂಜೀವಿನಿ' ಮಾಸಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಸಂಜೀವಿನಿ ಆರ್ಯುವೇದ ಮಹಾವಿದ್ಯಾಲಯ ಮುಖ್ಯ ಆಡಳಿತ ಅಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಕಾರ್ಯದರ್ಶಿ ಸೋಮಶೇಖರ್ ಹುದ್ದಾರ, ಸಿ.ಸಿ. ಹಿರೇಮಠ, ಸಂಜಯ್ ತ್ರಾಸದ್, ರವೀಂದ್ರ ಶಿರೋಳ್ಕರ್, ವಿದ್ಯಾರ್ಥಿಗಳು ಇದ್ದರು.