belavadi mallamma ಹುಬ್ಬಳ್ಳಿಯ ಬಸವ ಭವನದಲ್ಲಿ ಏರ್ಪಡಿಸಿದ್ದ ವೀರವನಿತೆ ಬೆಳವಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಜಶೇಖರ ಮೆಣಸಿನಕಾಯಿ, ನೀಲಕಂಠ ಅಸೂಟಿ, ನಂದಕುಮಾರ ಪಾಟೀಲ, ಬಸವರಾಜ ಕಿತ್ತೂರ, ಸಚಿನ್ ಪಾಟೀಲ, ಇತರರು ಪಾಲ್ಗೊಂಡಿದ್ದರು.
- ಪಂಚಮಸಾಲಿ ಟ್ರಸ್ಟ್ನಿಂದ 376ನೇ ಜಯಂತಿ ಆಚರಣೆ
- ರಾಷ್ಟ್ರೀಯ ಘಟಕದ ಕಾರ್ಯಾಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಅಭಿಮತ
ಹುಬ್ಬಳ್ಳಿ: belavadi mallamma ಕರ್ನಾಟಕ ಇತಿಹಾಸದಲ್ಲಿ ಅಪಾರ ಸಾಹಸ ಧೈರ್ಯ ಸ್ವಾಭಿಮಾನವನ್ನು ಪ್ರತಿಬಿಂಬಿಸುವ ಮಹಾನ್ ಮಹಿಳೆಯರಲ್ಲಿ ವೀರವನಿತೆ ಬೆಳವಡಿ ಮಲ್ಲಮ್ಮಾಜಿ ಅಪ್ರತಿಮರು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ರಾಷ್ಟ್ರೀಯ ಘಟಕದ ಕಾರ್ಯಾಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಹೇಳಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ನಗರದ ಕಾರವಾರ ರಸ್ತೆಯಲ್ಲಿರುವ ಬಸವ ಭವನದಲ್ಲಿ ವೀರವನಿತೆ ಬೆಳವಡಿ ಮಲ್ಲಮ್ಮ ಅವರ 376ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
16ನೇ ಶತಮಾನದಲ್ಲಿ ವೀರಮಾತೆ ಬೆಳವಡಿ ಮಲ್ಲಮ್ಮ ಅವರು ತೋರಿದ ಧೈರ್ಯ ಮತ್ತು ಸಂಸ್ಕೃತಿಯ ಮೌಲ್ಯಗಳು ಇಂದಿಗೂ ಸ್ಮರಣೀಯವಾಗಿವೆ. ಅಂದಿನ ದಿನಮಾನಗಳಲ್ಲಿ ಬೆಳವಡಿಯ ಕೋಟೆಯಲ್ಲಿ ಸುಮಾರು 3ಸಾವಿರ ವೀರ ವನಿತೆಯರ ಸ್ತ್ರೀ ಸೈನ್ಯ ಇತ್ತು. ಆ ಸೈನ್ಯಕ್ಕೆ ಸ್ವತಃ ರಾಣಿ ಮಲ್ಲಮ್ಮ ಅವರೇ ನಾಯಕತ್ವ ವಹಿಸಿದ್ದರು. ಯುದ್ಧಕಲೆ, ಧೈರ್ಯ ಮತ್ತು ದೇಶಭಕ್ತಿಯಲ್ಲಿ ಸ್ತ್ರೀಯರು ಅಪ್ರತಿಮರಾಗಿದ್ದರು ಎಂದರು.
ಮಲ್ಲಮ್ಮಾಜಿಯ ಧೈರ್ಯ, ಸಾಹಸವನ್ನು ಮೆಚ್ಚಿ ಛತ್ರಪತಿ ಶಿವಾಜಿ ಮಹಾರಾಜರು ಗೌರವದಿಂದ ತಮ್ಮ ಮನೆಗೆ ಆಹ್ವಾನಿಸಿ ಅಣ್ಣ- ತಂಗಿಯರ ಸಂಬಂಧದ ಸಂಕೇತವಾಗಿ ತಮ್ಮ ಮುಂಗೈಗೆ ರಕ್ಷೆ ಕಟ್ಟಿಸಿಕೊಳ್ಳುತ್ತಾರೆ. ಇದರ ಸಂಕೇತವೇ ಇಂದು ದೇಶಾದ್ಯಂತ ಆಚರಿಸಲಾಗುವ ರಕ್ಷಾ ಬಂಧನ ಎಂಬ ಪ್ರತಿತಿ ಇದೆ. ತಾಯಿ ಮಲ್ಲಮ್ಮಾಜಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಎಂದು ಹೇಳಿದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಕಾರ್ಯದರ್ಶಿ ನೀಲಕಂಠ ಅಸೂಟಿ, ಧರ್ಮದರ್ಶಿ ನಂದಕುಮಾರ ಪಾಟೀಲ, ಮುಖಂಡರಾದ ಸಚಿನ್ ಪಾಟೀಲ, ಪ್ರಶಾಂತ ಗುಂಡೆಗೌಡರ್, ಎಸ್.ಕೆ. ಕೊಟ್ರೇಶಿ, ಶಾಂತಗೌಡ ಪಾಟೀಲ, ಬಸವರಾಜ ಕಿತ್ತೂರ, ಗುರು ಬಾಳಿಕಾಯಿ, ಲೋಕೇಶ ಹಾದಿಮನಿ, ಸುಪ್ರಿತಾ ಗುಂಡೆಗೌಡರ, ಪೂಜಾ ಕರ್ಲಿ, ನೀಲಮ್ಮ ಬಾಳಿಕಾಯಿ, ಕವಿತಾ ಛಬ್ಬಿ, ಸರಸ್ವತಿ ಪಾಳೆದ, ಇತರರು ಪಾಲ್ಗೊಂಡಿದ್ದರು.