handicap ಹುಬ್ಬಳ್ಳಿಯ ಎ.ಜೆ. ಮುಧೋಳ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಬ್ಲಾಂಕೇಟ್, ರಗ್ ವಿತರಣೆ ಮಾಡಲಾಯಿತು. ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ನಜೀರ ಅಹ್ಮದ ಕೋಲಕಾರ, ಖಾದೀಮ ರಿಯಾಜ ಅಹ್ಮದ ಮುಲ್ಲಾ, ಇತರರು ಇದ್ದರು.
ಹುಬ್ಬಳ್ಳಿ: handicap ಅಂಗವಿಕಲರು, ವಯೋವೃದ್ಧರು, ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸಗಳು ನಿರಂತರ ನಡೆಯಬೇಕು ಎಂದು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಹೇಳಿದರು.
ಇಲ್ಲಿಯ ಎ.ಜೆ. ಮುಧೋಳ ಭವನದಲ್ಲಿ ಅಂಗವಿಕಲರ ದಿನಾಚರಣೆ ಅಂಗವಾಗಿ ಬುಧವಾರ ಕರ್ನಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಿಯೇಷನ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅರ್ಹರಿಗೆ ಬ್ಲಾಂಕೇಟ್, ರಗ್ ವಿತರಣೆ ಮಾಡಿ ಅವರು ಮಾತನಾಡಿದರು.
ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಬೇಕು, ಈ ದಿಸೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರ್ಕಾರ ಅಂಗವಿಕಲರಿಗೆ ನೀಡುವ ಮಾಸಾಶನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ನಜೀರ ಅಹ್ಮದ ಕೋಲಕಾರ ನೇತೃತ್ವ ವಹಿಸಿದ್ದರು.