ಧಾರವಾಡ: ಹರಿಯಾಣದ ಫರೀದಾಬಾದ್ನಲ್ಲಿ ಜರುಗಿದ ರೋಪ್ ಸ್ಕಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ವಿದ್ಯಾರ್ಥಿ ಬಸವರಾಜ ರುದ್ರಪ್ಪ ಹಜೇರಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. 2025ರಲ್ಲಿ ಸುಜಲ್ ಗುಪ್ತಾ ಹೆಸರಲ್ಲಿದ್ದ 5 ನಿಮಿಷದಲ್ಲಿ 990 ಸ್ಕಿಪ್ಸ್ ದಾಖಲೆ ಮುರಿದ ಬಸವರಾಜ ಹಜೇರಿ, 1,013 ಸ್ಕಿಪ್ಸ್ ಮಾಡಿ ದಾಖಲೆ ನಿಮಿರ್ಸಿದ್ದಾನೆ. ಸಾಧಕ ವಿದ್ಯಾರ್ಥಿಗೆ ಅವನ ತಂದೆ ರುದ್ರಪ್ಪ ಹಜೇರಿ ಹಾಗೂ ಮಾವ ಶತ್ರುಘ್ನ ಸಣ್ಣಮ್ಮನವರ ತರಬೇತಿ ನೀಡಿದ್ದರು.
ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಮನೋಜ ಹಂಚಿನಮನಿ, ಪ್ರಾಚಾರ್ಯ ರಾಜು ಕಡೆಮನಿ, ಆಡಳಿತಾಧಿಕಾರಿ ಸತೀಶ ಮಾಸೂರನಾಯಿಕ, ದೈಹಿಕ ಶಿಕ್ಷಣ ಶಿಕ್ಷಕ ಅರುಣ ಎಲಿಗಾರ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.