basavaraja bommai ಬರಗಾಲವನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರವು ಬರಗಾಲವನ್ನು basavaraja bommai ಗಂಭೀರವಾಗಿ ತೆಗೆದುಕೊಂಡಿಲ್ಲ. ಬರೀ ಅಧಿಕಾರ ಹಂಚಿಕೆ, ಪಡೆದುಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ಎಂದು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಸಂಕಷ್ಟದಲ್ಲಿ ಇದ್ದಾರೆ. ಶೇ. 30ರಷ್ಟು ಮಾತ್ರ ಬಿತ್ತನೆ ಆಗಿದೆ. ವಾರದೊಳಗೆ ಮಳೆ ಬಾರದಿದ್ದರೆ ಸಂಪೂರ್ಣ ಬರಗಾಲ ಬೀಳಲಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗಂಭಿರವಾಗಿ ಚಿಂತನೆ ಮಾಡಿಲ್ಲ. ಅವರು ಸರ್ಕಾರ ರಚಿಸುವಾಗಲೇ ಎಡವಿದ್ದಾರೆ. ಕೃಷಿ ಸಚಿವರಿಲ್ಲ. ಒಬ್ಬ ಸಚಿವರಿಗೆ ಮೂರ‌್ನಾಲ್ಕು ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದಾರೆ. ಅವರು ಸಮಸ್ಯೆ ಬಗೆಹರಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.
ಕೂಡಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೃಷಿ ತಜ್ಞರನ್ನು ಕರೆಯಿಸಿ ಚರ್ಚಿಸಿ, ಅಧಿಕಾರಿಗಳ ನೇತೃತ್ವದಲ್ಲಿ ಸರ್ವೇ ಮಾಡಿಸಬೇಕು. ನಂತರ ಬರಗಾಲ ಪೀಡಿತ ರಾಜ್ಯವೆಂದು ಘೋಷಣೆ ಮಾಡಬೇಕು. ಆಗ ಕೇಂದ್ರದಿಂದ ನೆರವು ಪಡೆಯಲು ಸಾಧ್ಯ. ಸದ್ಯ ಕರ್ನಾಟಕದಲ್ಲಿ ಅತ್ಯಂತ ಶೋಚನೀಯ ಸ್ಥಿತಿ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಅನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸರ್ಕಾರದ ಜಮೀನು ಇದ್ದಲ್ಲಿ ಮಾಡಲಿ, ಅದು ಬಿಟ್ಟು ರೈತರಿಂದ ಜಮೀನು ಪಡೆಯುವುದು ಎಷ್ಟು ಸರಿ? ಅವರಿಗೆ ಪರಿಹಾರ ಎಕರೆಗೆ 2 ಕೋಟಿ ರೂ. ಕೊಟ್ಟಂತೆ ಕೃಷ್ಣ ಮೇಲ್ದಂಡೆ ಯೋಜನೆಗೆ ರೈತರು ಕೊಟ್ಟ ಲಕ್ಷಾಂತರ ಎಕರೆ ಜಮೀನಿಗೂ ಪ್ರತಿ ಎಕರೆಗೆ 2 ಕೋಟಿ ರೂ. ಕೊಡುತ್ತಾರೆಯೇ? ಸರ್ಕಾರದ ಬೊಕ್ಕಸವನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಮೊನ್ನೆ ಒಂದೆಡೆ ಸೇರಿದ್ದರು. ಗೆಜೆಟ್ ನೊಟಿಫೀಕೇಷನ್ ವಿರುದ್ಧವಾಗಿ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಆಗಿರುವುದರ ಕುರಿತು ಡಿ.ಕೆ. ಶಿವಕುಮಾರ ಚಕಾರ ಎತ್ತಲಿಲ್ಲ. ವಿಷಾಯಾಧಾರಿತ ಚರ್ಚೆಗಳು ಆಗಲಿಲ್ಲ. ಸುಪ್ರೀಂಕೋರ್ಟ್‌ನಲ್ಲಿರುವ ಕೇಸ್ ವಜಾಗೊಳಿಸುವ ಸಂಬಂಧ ಮಾತನಾಡಬಹುದಿತ್ತಲವೇ? ಡಿ.ಕೆ. ಶಿವಕುಮಾರ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ ಹೊರತು, ಜನರ ಹಿತವಲ್ಲ ಎಂದು ಕುಟುಕಿದರು.