ಹುಬ್ಬಳ್ಳಿಯ ವಿಕಾಸನಗರದ ಸಂತ್ರಸ್ತೆ ಮನೆಗೆ (basangouda yatnal) ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೇಟಿ ನೀಡಿ, ಯುವತಿಯ ತಂದೆ-ತಾಯಿಗೆ ಸಾಂತ್ವನ ಹೇಳಿದರು. 
ಧಾರವಾಡ

(basangouda yatnal) ವಾರದೊಳಗೆ ಹೋರಾಟದ ರೂಪುರೇಷೆ

ಮರಿದೇವ ಹೂಗಾರ
ಹುಬ್ಬಳ್ಳಿ: ಇಲ್ಲಿಯ ವಿಕಾಸನಗರದ ಸಂತ್ರಸ್ತೆ ಮನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ (basangouda yatnal) ಸೋಮವಾರ ಭೇಟಿ ನೀಡಿ, ಯುವತಿಯ ತಂದೆ-ತಾಯಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ನಡೆಸುವ ವ್ಯವಸ್ಥಿತ ಜಾಲ ಇದೆ. ಇದಕ್ಕೆ ಭಯೋತ್ಪಾದಕ ಸಂಘಟನೆಗಳ ಬೆಂಬಲ ಇದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಸ್ಥಳೀಯ ಶಾಸಕರ ಮಾತು ಕೇಳಿ ಸುಮ್ಮನೆ ಕುಳಿತಿದ್ದಾರೆಯೇ? ಜೈಲಿನಲ್ಲಿ ಕುಳಿತು ಆರೋಪಿಯೊಬ್ಬ ಯುವತಿಗೆ ವಿಡಿಯೋ ಕಾಲ್ ಮಾಡಿ ಧಮಕಿ ಹಾಕುತ್ತಾನೆ. ಇಂಥವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಒಂದು ವಾರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರಿದ್ದಾರೆ. ಅವರಿಗೆ ಯಾವನೋ ಒಬ್ಬ ಕರೆ ಮಾಡಿ, ನಾನು ಲವ್ ಜಿಹಾದ್ ಮಾಡೀನಿ ಎನ್ನುತ್ತಾನೆ. ಜಾಮೀನು ಪಡೆಯುತ್ತಾನೆ. ಪೊಲೀಸರು ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಅವರಿಗೆ ಲವ್ ಜಿಹಾದ್ ಆಗಲಿ, ಭಾರತ ಹಾಳಾಗಲಿ, ಅವರಿಗೆ ಸಂಬಂಧ ಬೀಳುವುದಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಸರ್ಕಾರ ಬಂದಾಗ ನೀವು (ಪೊಲೀಸರು) ಎಲ್ಲಿಗೆ ಹೋಗುತ್ತೀರಿ? ಕರ್ನಾಟಕದಲ್ಲಿಯೇ ಇರಬೇಕು. ಧರ್ಮ, ದೇಶದ ಅಭಿಮಾನ ನೀವು ಇಟ್ಟುಕೊಳ್ಳಬೇಕು ಎಂದು ಚಾಟಿ ಬೀಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಹನುಮಂತಸಾ ನಿರಂಜನ ಇತರರು ಇದ್ದರು.