bank of india ಹುಬ್ಬಳ್ಳಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅಭಿನವ ಪಾಂಡೆ, ಶಶಿವರ್ಧನ ಕೆ.ಕೆ., ಮಧುಸೂದನ್, ದತ್ತಮೂರ್ತಿ ಕುಲಕರ್ಣಿ, ರಮೇಶ ಯರದಾಲ, ಇತರರು ಇದ್ದರು.
ಹುಬ್ಬಳ್ಳಿ: bank of india ಇಲ್ಲಿಯ ಗೋಕುಲ ರಸ್ತೆ ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ವತಿಯಿಂದ 21ನೇ ಸಂಸ್ಥಾಪನಾ ದಿನದ ನಿಮಿತ್ತ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಬ್ಯಾಂಕ್ ಆಫ್ ಇಂಡಿಯಾ ಹುಬ್ಬಳ್ಳಿ ಮತ್ತು ಬೆಳಗಾವಿ ಹಾಗೂ ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಅನೇಕ ಜನರು ರಕ್ತದಾನ ಮಾಡಿದರು.
ಶಿಬಿರದ ಆಯೋಜಕರಾದ ಅಭಿನವ ಪಾಂಡೆ, ಶಶಿವರ್ಧನ ಕೆ.ಕೆ., ಮಧುಸೂದನ್, ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಸಿದ್ದು ಅಂಗಡಿ ಉಪಸ್ಥಿತರಿದ್ದರು.
ರಮೇಶ ಯರದಾಲ, ಬ್ಯಾಂಕ್ ಸಿಬ್ಬಂದಿ ಮತ್ತು ರಕ್ತದಾನಿಗಳಿಗೆ ಅಭಿನಂದಿಸಲಾಯಿತು. ರಕ್ತದಾನ ಮಾಡಿದ ಬ್ಯಾಂಕ್ ಸಿಬ್ಬಂದಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಪ್ರಮಾಣ ಪತ್ರ ವಿತರಣೆ ಮಾಡಿದರು.