ಹುಬ್ಬಳ್ಳಿಯಲ್ಲಿ (balaji) ಶನಿವಾರ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ‘ಸ್ಪೈನ್ ಕಾನ್-26 ಏರ್ಪಡಿಸಲಾಗಿತ್ತು. 
ಧಾರವಾಡ

(balaji) ಶಸ್ತ್ರಚಿಕಿತ್ಸೆಯ ಕೌಶಲ ಪರಿಷ್ಕರಣೆಗೆ ಕಾರ್ಯಾಗಾರ ನೆರವು

ಮರಿದೇವ ಹೂಗಾರ
ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲು ಎದುರಿಸಿ ವೃತ್ತಿಯಲ್ಲಿ ಯಶಸ್ಸು(balaji) ಸಾಧಿಸಲು ಮತ್ತು ನವೀನ ತಂತ್ರಜ್ಞಾನದ ಪರಿಪೂರ್ಣತೆಗೆ ಅಗತ್ಯ ಕೌಶಲ ಪಡೆದು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಪಡೆಯಲು ಇಂತಹ ಕಾರ್ಯಾಗಾರಗಳು ಪ್ರಯೋಜನಕಾರಿ ಎಂದು ನರರೋಗ ತಜ್ಞ ಡಾ. ಸುರೇಶ ದುಗಾಣಿ ಅಭಿಪ್ರಾಯಪಟ್ಟರು.
ಇಲ್ಲಿಯ ಬಾಲಾಜಿ ಆಸ್ಪತ್ರೆಯ ಸಭಾಂಗಣದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಡಿ ಬೆನ್ನು ಮೂಳೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಶನಿವಾರ ಏರ್ಪಡಿಸಿದ್ದ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ‘ಸ್ಪೈನ್ ಕಾನ್-26 ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಆವಿಷ್ಕಾರ ನಿರಂತರವಾಗಿದೆ. ಅವುಗಳ ಬಳಕೆಯಲ್ಲಿ ಹಿಂದುಳಿದರೆ ವೃತ್ತಿಯಲ್ಲಿ ಯಶಸ್ಸು ಸಾಧಿಸಲಾಗದು. ಎಲ್ಲ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಸ್ಪರ್ಧಾತ್ಮಕತೆ ಹೆಚ್ಚುತ್ತಿದ್ದು, ಆಧುನಿಕ ಯುಗಕೆ ತಕ್ಕಂತೆ ವೃತ್ತಿ ಕೌಶಲ, ಜ್ಞಾನ, ನಾವಿನ್ಯತೆ ಹೊಂದಿ ಯಶಸ್ಸು ಸಾಧಿಸಬೇಕು ಎಂದರು.
ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಬೆನ್ನು ಮೂಳೆಯ ಶಸ್ತ್ರಚಿಕಿತ್ಸಾ ಕಾರ್ಯ ವಿಧಾನಗಳಲ್ಲಿ ನವೀನ ತಂತ್ರಜ್ಞಾನಗಳ ಬಳಕೆ ಕುರಿತು ಕೌಶಲಧಾರಿತ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಆಯೋಜಿಸಲಾಗಿದೆ. ಯುವ ನರರೋಗ ಶಸ್ತ್ರಚಿಕಿತ್ಸಕರಿಗೆ ತಮ್ಮ ಶಸ್ತ್ರ ಚಿಕಿತ್ಸಾ ಕೌಶಲತೆ ಪರಿಷ್ಕರಿಸಲು, ಶಸ್ತ್ರಚಿಕಿತ್ಸಾ ಶ್ರೇಷ್ಠತೆ ಹೆಚ್ಚಿಸಿಕೊಳ್ಳಲು ಮತ್ತು ಪರಸ್ಪರ ಜ್ಞಾನ ಹಂಚಿಕೊಳ್ಳಲು ನೆರವಾಗಲಿದೆ ಎಂದರು.
ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಕಾರ್ಯಾಗಾರದಲ್ಲಿ ತಜ್ಞ ವೈದ್ಯರ ತಂಡದಿಂದ 4 ಯಶಸ್ವಿ ಶಸ್ತ್ರ ಚಿಕಿತ್ಸೆಗಳು ನಡೆದವು. ಸಮಾರೋಪದಲ್ಲಿ ಶಿಬಿರಾರ್ಥಿಗಳಿಂದ ಸಂವಾದ ನಡೆಯಿತು. ರಾಜ್ಯ, ಅಂತಾರಾಜ್ಯಗಳಿಂದ 40ಕ್ಕೂ ಹೆಚ್ಚು ಹಿರಿ-ಕಿರಿಯ ಶಸ್ತ್ರಚಿಕಿತ್ಸಕರು ಪಾಲ್ಗೊಂಡಿದ್ದರು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಬೆಂಗಳೂರು ಫೋರ್ಟಿಸ್ ಆಸ್ಪತ್ರೆಯ ನರರೋಗ ತಜ್ಞ ಡಾ. ಉಮೇಶ ಶ್ರೀಕಾಂತ, ಡಾ.ಎಸ್.ಪಿ. ಬಳಿಗಾರ, ಡಾ. ಸೋಮೇಶ್ವರ ಗಡ್ಡಿ, ಡಾ.ಎಸ್.ಎಫ್. ಕಮ್ಮಾರ ಇತರರು ಉಪಸ್ಥಿತರಿದ್ದರು.