balaji hospital ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್  
ಧಾರವಾಡ

balaji hospital ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಚಿಕಿತ್ಸೆ ಯಶಸ್ವಿ

ಹುಬ್ಬಳ್ಳಿ: ಮಿದುಳಿಗೆ ರಕ್ತ ಪೂರೈಸುವ ಕುತ್ತಿಗೆಯಲ್ಲಿನ ಕೆರೋಟಿಡ್ ಆರ್ಟೆರಿ ಎಂಬ ರಕ್ತನಾಳದಲ್ಲಿನ ಮುಚ್ಚಿದ ಭಾಗ (ಬ್ಲಾಕೇಜ್) ತೆಗೆಯಲು ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಎಂಬ ಅತ್ಯಾಧುನಿಕ ವಿಧಾನವನ್ನು

ಹುಬ್ಬಳ್ಳಿ

ಯ ಬಾಲಾಜಿ ಆಸ್ಪತ್ರೆಯ

balaji hospital

ವೈದ್ಯರು ಅನುಸರಿಸಿದ್ದಾರೆ. ಈ ಮೂಲಕ ರೋಗಿಯೊಬ್ಬರಿಗೆ ಸಂಭವಿಸಬಹುದಾಗಿದ್ದ ಪಾರ್ಶ್ವವಾಯು ಸಮಸ್ಯೆಯಿಂದ ಪಾರು ಮಾಡಿದ್ದಾರೆ.

ಬಳ್ಳಾರಿ ಮೂಲದ ರೋಗಿಯು ತಮ್ಮ ಪರಿವಾರಡೊಡನೆ ಕೇರಳಂ ಪ್ರವಾಸದಲ್ಲಿದ್ದಾಗ ಏಕಾಏಕಿ ತಲೆ ತಿರುಗಿ ಬಿದ್ದಾಗ ಕೇರಳಂನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದರು. ಕೆಲ ದಿನಗಳ ಬಳಿಕ ಮತ್ತೆ ತಲೆ ತಿರುಗಿ ಬಿದ್ದಾಗ ಆತಂಕಗೊಂಡ ಕುಟುಂಬಸ್ಥರು, ಬಳ್ಳಾರಿಯ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದರು. ರಕ್ತನಾಳದಲ್ಲಿ ಶೇ. 95ರಷ್ಟು ಬ್ಲಾಕೇಜ್ ಇರುವುದು ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಯ ಸಲಹೆ ನೀಡಿ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು.
ಈ ಚಿಕಿತ್ಸಾ ವರದಿಯೊಂದಿಗೆ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ಬಂದ ಕುಟುಂಬಸ್ಥರು ಡಾ. ಕ್ರಾಂತಿಕಿರಣ ಅವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದ್ದರು. ರೋಗಿಯ ರೋಗ ಲಕ್ಷಣ, ಸ್ಕ್ಯಾನಿಂಗ್ ಮತ್ತು ಎಂಜಿಯೋಗ್ರಫಿ ವರದಿ ಪರಿಶೀಲಿಸಿದ ವೈದ್ಯರು ಕುತ್ತಿಗೆಯಲ್ಲಿನ ಕೆರೋಟಿಡ್ ಆರ್ಟೆರಿ ರಕ್ತನಾಳದ ಬ್ಲಾಕೇಜ್‌ನಿಂದ ಸಂಭವಿಸಬಹುದಾಗಿದ್ದ ಪಾರ್ಶ್ವವಾಯು ಅಪಾಯದ ಕುರಿತು ಕುಟುಂಬಸ್ಥರಿಗೆ ಮನವರಿಕೆ ಮಾಡಿ, ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಚಿಕಿತ್ಸೆಗೆ ರೋಗಿಯನ್ನು ಸಜ್ಜುಗೊಳಿಸಿದರು.
ಕಾರ್ಯಪ್ರವೃತ್ತರಾದ ಡಾ. ಕ್ರಾಂತಿಕಿರಣ ಹಾಗೂ ಹೃದ್ರೋಗ ತಜ್ಞ ಡಾ. ನಿತಿನ್ ಕಡಕೋಳ ನೇತೃತ್ವದ ಬಾಲಾಜಿ ಆಸ್ಪತ್ರೆ ವೈದ್ಯರ ತಂಡ ರೋಗಿಯ ಮಿದುಳಿಗೆ ರಕ್ತ ಸಾಗಿಸುವ ಕುತ್ತಿಗೆ ಬಳಿಯ ಕೆರೋಟಿಡ್ ಆರ್ಟೆರಿ ರಕ್ತನಾಳಗಳಲ್ಲಿ ತುಂಬಿಕೊಂಡಿದ್ದ ಬ್ಲಾಕೇಜ್ ತೆಗೆಯಲು ಕೆರೋಟಿಡ್ ಆರ್ಟೆರಿ ಸ್ಟೆಂಟಿಂಗ್ ಎನ್ನುವ ಅತ್ಯಾಧುನಿಕ ಚಿಕಿತ್ಸೆ ನೀಡಿ ಕುತ್ತಿಗೆಯಲ್ಲಿ ಸ್ಟಂಟ್ ಅಳವಡಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ರೋಗಿಯನ್ನು 1 ದಿನ ತೀವ್ರ ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಯಿತು. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇದೀಗ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ, ಬ್ಲಾಕೇಜ್‌ನಿಂದಾಗಿ ಪದೇ ಪದೆ ತಲೆ ತಿರುಗಿ ಬೀಳುತ್ತಿದ್ದ ರೋಗಿಗೆ ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಚಿಕಿತ್ಸೆ ಮೂಲಕ ಸಂಭವಿಸಬಹುದಾಗಿದ್ದ ಪಾರ್ಶ್ವವಾಯುವಿನ ಅಪಾಯ ತಪ್ಪಿಸಿದಂತಾಗಿದೆ ಎಂದಿದ್ದಾರೆ.